ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕೊಕ್ರಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ),ಗುರುವಾಯನಕೆರೆ ಪ್ರಗತಿ ಬಂಧು ಒಕ್ಕೂಟ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಹಾಗೂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವಕಾಲೇಜು ಕೊಕ್ರಾಡಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
.
ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಜನಜಾಗೃತಿ ಮಾಜಿ ಅಧ್ಯಕ್ಷರು ಹಿರಿಯರಾದ ಪಿ.ಕೆ.ರಾಜು ಪೂಜಾರಿ ಕಾಶಿಪಟ್ಣರವರು ಉದ್ಘಾಟಿಸಿ ದುರಾಭ್ಯಾಸಗಳಿಗೆ ಬಲಿಯಾಗದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿರೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

.ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ತಾಲೂಕು ಜನ ಜಾಗೃತಿ ವೇದಿಕೆ, ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಹೆಗ್ಡೆ ಇವರು ವಿದ್ಯಾರ್ಥಿಗಳಿಗೆ ದುಶ್ಚಟಗಳ ವಿಧಗಳು, ದುಶ್ಚಟದಿಂದ ಉಂಟಾಗುವ ಕೌಟುಂಬಿಕ ವ್ಯತಿರಿಕ್ತ ಪರಿಣಾಮಗಳು ಮತ್ತು ಆರ್ಥಿಕ, ಆರೋಗ್ಯ ಸಂಬಂಧಿತ ಸಮಸ್ಯೆಗಳು, ಸಮಾಜಪೂರಕ ಜೀವನ ಕ್ರಮ, ದುಶ್ಚಟಕ್ಕೆ ಒಳಗಾಗದಂತಹ ಪ್ರಭಲ ಮನಸ್ಸಿನ ಅಗತ್ಯತೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ದುಶ್ಚಟ ಪೂರಕ ಕಾರ್ಯಗಳಿಗೆ ಪ್ರತಿರೋಧ ನೀಡಬೇಕಾದ ಅಗತ್ಯ ಮುಂತಾದ ವಿಷಯಗಳ ಕಡೆ ಗಮನ ಸೆಳೆದರು. ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ದುಶ್ಚಟ ಮುಕ್ತ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು


ಕಾರ್ಯಕ್ರಮದ ಸಭಾಧ್ಯಕ್ಷರು ಕೊಕ್ರಾಡಿ ಕಾಲೇಜಿನ ಪ್ರಾಂಶುಪಾಲರಾದ ನಾಬ೯ಟ್೯ ಮಾರ್ಟಿಸ್ ನಿಜ ಜೀವನದ ದೃಷ್ಟಾಂತದ ಮೂಲಕ ದುಶ್ಚಟದಿಂದ ಮುಕ್ತರಾಗಲು ಸಲಹೆ ನೀಡಿದರು.

ಮುಖ್ಯ ಶಿಕ್ಷಕರಾದ ಎಚ್ .ಎಸ್. ಶ್ರೀಕೃಷ್ಣ ನಾರಾವಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನಿತ್ಯಾನಂದ ಎನ್ ನಾವರ , ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರುಗಳಾದ ಪಿ.ರಾಜು ಶೆಟ್ಟಿ ಪೊನ್ನೆಮಾರಡ್ಡ ಕೊಕ್ರಾಡಿ, ಜಯರಾಜ್ ಹೆಗ್ಡೆ ಸಾವ್ಯ,ಶಾಲಾ ನಾಯಕರಾದ ಕುಮಾರಿ ರಮಿತಾ, ಸೂರಜ್ ಕುಮಾರ್, ವಲಯದ ಮೇಲ್ವಿಚಾರಕರು ಶ್ರೀಮತಿ ದಮಯಂತಿ, ಶಶಿಧರ ಕುಲಾಲ್, ಉಪನ್ಯಾಸಕರು ,ಅಧ್ಯಾಪಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು,

Leave a Comment

error: Content is protected !!