ಉಜಿರೆ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ ಕಾರ್ಯಕ್ರಮದ ಉದ್ಘಾಟನೆಯು ಉಜಿರೆ ರಾಮಕೃಷ್ಣ ಮಂಟಪದಲ್ಲಿ ನಡೆಯಿತು.
ದೀಪ ಪ್ರಜ್ವಲನೆಯನ್ನು ವರ್ತಕರ ಸಂಘದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ನೇರವೇರಿಸಿ ಶುಭಕೋರಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವರ್ತಕರ ಸಂಘದ ಸಲಹೆಗಾರ ಪದ್ಮನಾಭ ಶೆಟ್ಟಿಗಾರ್ ನೇರವೇರಿಸಿ ಶುಭ ಕೋರಿದರು.
ಮುಖ್ಯ ಅತಿಥಿಯಾಗಿ ಸಂಚಾರಿ ಪೋಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಅರ್ಜುನ್, ಸೈಂಟ್ ಸೆಬಾಸ್ಟಿನ್ ಆಟೋ ಇಂಜಿನಿಯರಿಂಗ್ ವರ್ಕ್ಸ್ನ ಆ್ಯಂಟನಿ ಟಿ.ಆರ್,ಉಜಿರೆ ಧನಲಕ್ಷ್ಮಿ ಜ್ಯುವೆಲ್ಲರ್ಸ್ ನ ರಮೇಶ್ ಆಚಾರ್ಯ,ಭಾರತ್ ಫೂಟ್ ವೇರ್ಸ್ ನ ಅಬ್ಬಾಸ್ ಮೊಹಮ್ಮದ್,ದಿಶಾ ಫುಡ್ ಕಾರ್ನರ್ ನ ಅರುಣ್ ಕುಮಾರ್,ಸಮೃದ್ದಿ ಟ್ರೇಡರ್ಸ್ ನ ಇಬ್ರಾಹಿಂ ಉಪಸ್ಥಿತರಿದ್ದರು.ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಉಜಿರೆ ಬೆನಕ ಹೆಲ್ತ್ ಸೆಂಟರ್ ಡಾ.ಗೋಪಾಲಕೃಷ್ಣ ಅವರು ಮಾತನಾಡಿ ಕಳೆದ 3 ದಶಕಗಳ ಹಿಂದೆ ಉಜಿರೆಯಲ್ಲಿ ಕೆಲವೇ ಕಲವು ಅಂಗಡಿಗಳಿತ್ತು, ಆವಾಗ ಯಾರಿಗೂ ಆಗುತ್ತಿರಲಿಲ್ಲ, ಉಜಿರೆ ಇವತ್ತು ತುಂಬಾ ಬೆಳೆದಿದೆ.ಎಲ್ಲಾ ವರ್ತಕರು ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕುಟುಂಬ ಮಿಲನ ಕಾರ್ಯಕ್ರಮದಿಂದ ಎಲ್ಲರೂ ಬೆಸೆಯುವಾಗೆ ಆಗಿದ್ದು ಸಂತೋಷ ತಂದಿದೆ.
ಖ್ಯಾತ ವಕೀಲರಾದ ಬಿ.ಕೆ ಧನಂಜಯ್ ರಾವ್ ಮಾತನಾಡಿ ವರ್ತಕರಿಗೆ ಅವಕಾಶ ನೀಡಿದಾಗ ಅವರು ಮತ್ತೊಬ್ಬರಿಗೆ ಸ್ಪೂರ್ತಿಯಾಗುತ್ತಾರೆ.ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಒಬ್ಬ ಕಲಾವಿದ ಇರುತ್ತಾನೆ.ಆದರೆ ಅವಕಾಶ ಸಿಗಬೇಕು.ಇವತ್ತು ಕೌಟುಂಬಿಕ ಸಾಮರಸ್ಯದ ಕಾರ್ಯಕ್ರಮ ನಡೆದಿದೆ ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ವಹಿಸಿದ್ದರು.ವೇದಿಕೆಯಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್,ರಾಜಸ್ಥಾನ ವಿಷ್ಣು ಸಮಾಜ ಉಜಿರೆ ಇದರ ಅಧ್ಯಕ್ಷ ಮೋಹನ್ ಚೌಧರಿ,ಬ್ಯೂಟಿಶಿಯನ್ ಅಸೋಸಿಯೇಷನ್ ಕಾರ್ಯದರ್ಶಿ ಸುನಿತಾ ಬೈಜು, ವರ್ತಕರ ಸಂಘದ ಕಾರ್ಯದರ್ಶಿ ಲಕ್ಷ್ಮಣ ಗೌಡ ಉಪಸ್ಥಿತರಿದ್ದರು.
ಜಗದೀಶ್ ಇಂಜಿನಿಯರ್ ಸ್ವಾಗತಿಸಿದರು. ಚಂದ್ರಹಾಸ ಬಳಂಜ, ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.ವರ್ತಕರ ಸಂಘದ ಸದಸ್ಯರು ಸಹಕರಿಸಿದರು.ಮಹಿಳೆಯರಿಗೆ,ಪುರುಷರಿಗೆ,ಮಕ್ಕಳಿಗೆ ವಿವಿಧ ಆಟೋಟ ಸ್ಪರ್ದೆಗಳು ನಡೆಯಿತು. ಸುಮಾರು 50ಕ್ಕೂ ಹೆಚ್ವು ಬಗೆಯ ವಿವಿಧ ತಿಂಡಿ ತಿನಸುಗಳಿದ್ದವು. ಪ್ರಾಚೀನ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು.