23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಉಜಿರೆ: ಎಸ್.ಡಿ.ಎಂ.ಕಾಲೇಜು ಉಜಿರೆ,ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುವರ್ಣ ಸಂಭ್ರಮಾಚರಣೆ,ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳು ಉಜಿರೆ,ರೋಟರಿ ಕ್ಲಬ್ ಬೆಳ್ತಂಗಡಿ, ಪತ್ರಕರ್ತರ ಸಂಘ ಬೆಳ್ತಂಗಡಿ, ಎಸ್.ಡಿ.ಎಂ.ಮಲ್ಟಿ ಹಾಸ್ಪಿಟಲ್ ಉಜಿರೆ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಆ. 18 ರಂದು ನಡೆಯಿತು.

ರಕ್ತದಾನ ಶಿಬಿರದ ಉದ್ಘಾಟನೆಯನ್ನು ಸಿರಿ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕ ಕೆ.ಎಮ್ ಜನಾರ್ಧನಾ ನೇರವೇರಿಸಿ ರಕ್ತದಾನ ಮಾಡುವುದರಿಂದ ವ್ಯಕ್ತಿಯ ಜೀವ ಉಳಿಸಿದ ಭಾವನೆ ಜತೆಯಲ್ಲಿ ದಾನಿಯ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ ಕುಮಾರ ಹೆಗ್ಡೆ ವಹಿಸಿ ಮಾತನಾಡಿ ಜೀವವನ್ನು ಉಳಿಸಲು ನಾವು ವೈದ್ಯರಾಗಬೇಕಿಲ್ಲ, ರಕ್ತದಾನ ಮಾಡಿದರೆ ಸಾಕು, ರಕ್ತದಾನ ಮಾಡಿ ಜೀವ ಉಳಿಸಿದ ಸಂತೃಪ್ತಿ ಹೊಂದಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ,ಯೋಜನಾಧಿಕಾರಿ ಸುರೇಂದ್ರ,ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್,ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರಾದ ಅಕ್ಷರ ಪ್ರಿಂಟರ್ಸ್ ಮಾಲಕ ಅನಿಲ್ ಕುಮಾರ್ ಶಿಬಾಜೆ,ಯೂಪ್ಲಸ್ ಚಾನೆಲ್ ಮುಖ್ಯಸ್ಥ ದಿನೇಶ್ ಕೋಟ್ಯಾನ್ ,ಪ್ರಮುಖರಾದ ರಾಘವೇಂದ್ರ ನಿಡಿಗಲ್ರಶ್ಮಿ ಸ್ಟುಡಿಯೋ ಮಾಲಕ ರಾಮಕೃಷ್ಣ ರೈ,ಯಶೋಧರ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸುರಕ್ಷಾ ಮೆಡಿಕಲ್ ನ ಶ್ರೀಧರ್ ಕೆ.ವಿ ವಂದಿಸಿದರು.ತಿಮ್ಮಯ್ಯ ನಾಯ್ಕ ಮತ್ತು ಸಮೀಕ್ಷಾ ಶಿರ್ಲಾಲು ನಿರೂಪಿಸಿದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್,ದೀಪಾ ಆರ್.ಪಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಿದರು.

Related posts

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿಯ ನೂತನ ಅಧ್ಯಕ್ಷರಾಗಿ ಸುದರ್ಶನ್ ಶೆಟ್ಟಿ ನೇಮಕ

Suddi Udaya

ಮಚ್ಚಿನ: ಹಿಂದೂ ರುದ್ರ ಭೂಮಿಯ ಕಾಮಗಾರಿಗೆ ಮಂಜೂರಾದ ಅನುದಾನವನ್ನು ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡರಿಂದ ರೂ 2.5 ಲಕ್ಷ ಹಸ್ತಾಂತರ

Suddi Udaya

ಇಳಂತಿಲ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ವೆಂಕಟ್ರಮಣ ಭಟ್, ಉಪಾಧ್ಯಕ್ಷರಾಗಿ ಉಮಾವತಿ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ರಿಗೆ ಸನ್ಮಾನ

Suddi Udaya

ನ.9: ನಾಳ-ಗೇರುಕಟ್ಟೆ ಯಕ್ಷಾರಾಧನಾ ಕಲಾ ಪ್ರತಿಷ್ಠಾನ ಸಹಯೋಗದೊಂದಿಗೆ “ಯಕ್ಷೋತ್ಸವ”

Suddi Udaya
error: Content is protected !!