April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ ಕಾರ್ಯಕ್ರಮ

ಉಜಿರೆ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ ಕಾರ್ಯಕ್ರಮದ ಉದ್ಘಾಟನೆಯು ಉಜಿರೆ ರಾಮಕೃಷ್ಣ ಮಂಟಪದಲ್ಲಿ ನಡೆಯಿತು.

ದೀಪ ಪ್ರಜ್ವಲನೆಯನ್ನು ವರ್ತಕರ ಸಂಘದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ನೇರವೇರಿಸಿ ಶುಭಕೋರಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವರ್ತಕರ ಸಂಘದ ಸಲಹೆಗಾರ ಪದ್ಮನಾಭ ಶೆಟ್ಟಿಗಾರ್ ನೇರವೇರಿಸಿ ಶುಭ ಕೋರಿದರು.

ಮುಖ್ಯ ಅತಿಥಿಯಾಗಿ ಸಂಚಾರಿ ಪೋಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಅರ್ಜುನ್, ಸೈಂಟ್ ಸೆಬಾಸ್ಟಿನ್ ಆಟೋ ಇಂಜಿನಿಯರಿಂಗ್ ವರ್ಕ್ಸ್ನ ಆ್ಯಂಟನಿ ಟಿ.ಆರ್,ಉಜಿರೆ ಧನಲಕ್ಷ್ಮಿ ಜ್ಯುವೆಲ್ಲರ್ಸ್ ನ ರಮೇಶ್ ಆಚಾರ್ಯ,ಭಾರತ್ ಫೂಟ್ ವೇರ್ಸ್ ನ ಅಬ್ಬಾಸ್ ಮೊಹಮ್ಮದ್,ದಿಶಾ ಫುಡ್ ಕಾರ್ನರ್ ನ ಅರುಣ್ ಕುಮಾರ್,ಸಮೃದ್ದಿ ಟ್ರೇಡರ್ಸ್ ನ ಇಬ್ರಾಹಿಂ ಉಪಸ್ಥಿತರಿದ್ದರು.ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಉಜಿರೆ ಬೆನಕ ಹೆಲ್ತ್ ಸೆಂಟರ್ ಡಾ.ಗೋಪಾಲಕೃಷ್ಣ ಅವರು ಮಾತನಾಡಿ ಕಳೆದ 3 ದಶಕಗಳ ಹಿಂದೆ ಉಜಿರೆಯಲ್ಲಿ ಕೆಲವೇ ಕಲವು ಅಂಗಡಿಗಳಿತ್ತು, ಆವಾಗ ಯಾರಿಗೂ ಆಗುತ್ತಿರಲಿಲ್ಲ, ಉಜಿರೆ ಇವತ್ತು ತುಂಬಾ ಬೆಳೆದಿದೆ.ಎಲ್ಲಾ ವರ್ತಕರು ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕುಟುಂಬ ಮಿಲನ ಕಾರ್ಯಕ್ರಮದಿಂದ ಎಲ್ಲರೂ ಬೆಸೆಯುವಾಗೆ ಆಗಿದ್ದು ಸಂತೋಷ ತಂದಿದೆ.

ಖ್ಯಾತ ವಕೀಲರಾದ ಬಿ.ಕೆ ಧನಂಜಯ್ ರಾವ್ ಮಾತನಾಡಿ ವರ್ತಕರಿಗೆ ಅವಕಾಶ ನೀಡಿದಾಗ ಅವರು ಮತ್ತೊಬ್ಬರಿಗೆ ಸ್ಪೂರ್ತಿಯಾಗುತ್ತಾರೆ.ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಒಬ್ಬ ಕಲಾವಿದ ಇರುತ್ತಾನೆ.ಆದರೆ ಅವಕಾಶ ಸಿಗಬೇಕು.ಇವತ್ತು ಕೌಟುಂಬಿಕ ಸಾಮರಸ್ಯದ ಕಾರ್ಯಕ್ರಮ‌ ನಡೆದಿದೆ ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ವಹಿಸಿದ್ದರು.ವೇದಿಕೆಯಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್,ರಾಜಸ್ಥಾನ ವಿಷ್ಣು ಸಮಾಜ ಉಜಿರೆ ಇದರ ಅಧ್ಯಕ್ಷ ಮೋಹನ್ ಚೌಧರಿ,ಬ್ಯೂಟಿಶಿಯನ್ ಅಸೋಸಿಯೇಷನ್ ಕಾರ್ಯದರ್ಶಿ ಸುನಿತಾ ಬೈಜು, ವರ್ತಕರ ಸಂಘದ ಕಾರ್ಯದರ್ಶಿ ಲಕ್ಷ್ಮಣ ಗೌಡ ಉಪಸ್ಥಿತರಿದ್ದರು.

ಜಗದೀಶ್ ಇಂಜಿನಿಯರ್ ಸ್ವಾಗತಿಸಿದರು. ಚಂದ್ರಹಾಸ ಬಳಂಜ, ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ‌ ನಿರೂಪಿಸಿದರು.ವರ್ತಕರ ಸಂಘದ ಸದಸ್ಯರು ಸಹಕರಿಸಿದರು.ಮಹಿಳೆಯರಿಗೆ,ಪುರುಷರಿಗೆ,ಮಕ್ಕಳಿಗೆ ವಿವಿಧ ಆಟೋಟ ಸ್ಪರ್ದೆಗಳು ನಡೆಯಿತು. ಸುಮಾರು 50ಕ್ಕೂ ಹೆಚ್ವು ಬಗೆಯ ವಿವಿಧ ತಿಂಡಿ ತಿನಸುಗಳಿದ್ದವು. ಪ್ರಾಚೀನ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು.

Related posts

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ನವಜೀವನೋತ್ಸವ ಕಾರ್ಯಕ್ರಮ: ಪಾನ ಮುಕ್ತ ಗ್ರಾಮ ಸಾಧಕರಿಗೆ ಗೌರವ-ಜಾಗೃತಿ ಅಣ್ಣ ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ

Suddi Udaya

ಬಳಂಜ ಶಿಕ್ಷಕರ ಸಹಕಾರಿ ಬ್ಯಾಂಕ್‌ನ ನಿವೃತ್ತ ಅಧಿಕಾರಿ ರವೀಂದ್ರ ಶೆಟ್ಟಿ ರವರಿಗೆ “ಚುಟುಕು ಚಿನ್ಮಯಿ” ಗೌರವ ಪ್ರಶಸ್ತಿ

Suddi Udaya

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯ ಶಿಕ್ಷಕ ಯುವರಾಜ್ ರವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಸೆ.23: ಮಡಂತ್ಯಾರು ಪ್ರಾ.ಕೃ.ಪ.ಸ. ಸಂಘದ 50 ರ ಸುವರ್ಣ ಮಹೋತ್ಸವ ಸಂಭ್ರಮ: ಸವಿ ನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ ‘ಪರಿಶ್ರಮ’ ಇದರ ಉದ್ಘಾಟನಾ ಸಮಾರಂಭ: ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ‌ ಶುಭ ಹಾರೈಸಿದ ಸಹಕಾರ ರತ್ನ ಡಾ‌. ಎಂ.ಎನ್ ರಾಜೇಂದ್ರ ಕುಮಾರ್

Suddi Udaya

ಶಿಬಾಜೆ ಪತ್ತಿಮಾರಿನ ರಾಘವೇಂದ್ರ ಅಭ್ಯಂಕರ್ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ: ಪಸಲು ಬರುವ 10 ತೆಂಗಿನ ಮರ 40 ಅಡಿಕೆ ಮರ ನಾಶ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ