26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆ

ನಾರಾವಿ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆಯ ಸಭೆಯು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಆ.18 ರಂದು ನಡೆಯಿತು.

ಮೇಲ್ವಿಚಾರಕರಾದ ದಮಯಂತಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ವಲಯದಲ್ಲಿ ಒಟ್ಟು 15 ಭಜನಾ ಮಂಡಳಿಗಳಿದ್ದು ಇದರಲ್ಲಿ ಒಬ್ಬರು ಸಂಚಾಲಕರು ಹಾಗೂ 5 ಮಂದಿ ಪದಾಧಿಕಾರಿಗಳ ಅಯ್ಕೆ ಮಾಡುವ ಬಗ್ಗೆ ತಿಳಿಸಿದರು. ನಂತರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಸಂತೋಷ್ ಮರ್ದೋಟ್ಟು, ಅಧ್ಯಕ್ಷರಾಗಿ ರಾಜು ಪೂಜಾರಿ, ಉಪಾಧ್ಯಕ್ಷರಾಗಿ ಸುಧಾಕರ, ಕಾರ್ಯದರ್ಶಿ ಹರೀಶ್ ಯನ್, ಜತೆ ಕಾರ್ಯದರ್ಶಿ ಅಕ್ಷಯ್, ಕೋಶಾಧಿಕಾರಿಯಾಗಿ ಚಂದ್ರ ಶೇಖರ ರಾವ್ , ಹಾಗೂ ಯೋಗೀಶ್ ಆಚಾರ್ಯ, ಇವರನ್ನು ಭಜನಾ ಮಂಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು. ನಾರಾವಿ ಸೇವಾ ಪ್ರತಿನಿಧಿ ರೇಷ್ಮಾ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಹರಿಣಾಕ್ಷಿ ಸ್ವಾಗತಿಸಿದರು. ಸಭೆಯ ಕೊನೆಗೆ ಕೊಕ್ರಾಡಿ ಸಾವ್ಯ ಸೇವಾಪ್ರತಿನಿಧಿ ಶಶಿಧರ್ ಕುಲಾಲ್ ಧನ್ಯವಾದವಿತ್ತರು.

Related posts

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಆಡಳಿತ ಮಂಡಳಿಯ ಚುನಾವಣೆ: ಅಂಡಿಂಜೆಯಲ್ಲಿ ಸಹಕಾರ ಭಾರತಿ ಸಭೆ

Suddi Udaya

ಮಳೆಗೆ ಕೊಚ್ಚಿ ಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಾಣ

Suddi Udaya

ಬೆಳ್ತಂಗಡಿ: ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಪರ ತೆಂಕಕಾರಂದೂರುನಲ್ಲಿ ಮಹಿಳಾ ಕಾರ್ಯಕರ್ತರಿಂದ ಮತಯಾಚನೆ

Suddi Udaya

ಎಸ್‌ಡಿಪಿಐ ಸಂಸ್ಥಾಪನಾ ದಿನ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ

Suddi Udaya

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಘಟಕದಿಂದ ಸಾರಿಗೆ ಇಲಾಖೆಯ ನಿರ್ಲಕ್ಷತೆಯಿ೦ದ ನಡೆದ ಬಸ್‌ ಅಪಘಾತ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆಯ ವಿರುದ್ಧ ರಸ್ತೆ ತಡೆ ಮಾಡಿ ಪ್ರತಿಭಟನೆ

Suddi Udaya

ಕುಕ್ಕೇಡಿ ಗ್ರಾ.ಪಂ. ವತಿಯಿಂದ “ಆಧಾರ್ ಸೀಡಿಂಗ್” ಕ್ಯಾಂಪ್

Suddi Udaya
error: Content is protected !!