25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಆನ್ಸ್ ಕ್ಲಬ್ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭ: ನೂತನ ಅಧ್ಯಕ್ಷೆಯಾಗಿ ಗಾಯತ್ರಿ ಶ್ರೀಧರ್ ಹಾಗೂ ಕಾರ್ಯದರ್ಶಿಯಾಗಿ ಡಾ.ವಿನಯಾ ಕಿಶೋರ್ ಅಧಿಕಾರ ಸ್ವೀಕಾರ

ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಂಗ ಸಂಸ್ಥೆಯಾದ ರೋಟರಿ ಆನ್ಸ್ ಕ್ಲಬ್ ಇದರ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭ ಆ. 15 ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ನಡೆಯಿತು.


ನೂತನ ಅಧ್ಯಕ್ಷೆಯಾಗಿ ಗಾಯತ್ರಿ ಶ್ರೀಧರ್ ಅಧಿಕಾರ ಸ್ವೀಕರಿಸಿದರೆ, ಕಾರ್ಯದರ್ಶಿಯಾಗಿ ಡಾ.ವಿನಯಾ ಕಿಶೋರ್ ಅವರು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ರೊ ಪೂರನ್ ವರ್ಮ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು .ಪದ ಪ್ರಧಾನ ಅಧಿಕಾರಿಯಾಗಿ ರೊ ಸೋನಿಯಾವರ್ಮ ನೂತನ ಪದಾಧಿಕಾರಿಗಳಿಗೆ ಅಧಿಕಾರ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಮೂಡಬಿದ್ರೆಯ ನೋಟರಿ ವಕೀಲರಾದ ಶ್ರೀಮತಿ ಶ್ವೇತ ಜೈನ್ ಅವರು ಮಾತನಾಡಿ ಮಹಿಳೆಯರು ತಮ್ಮಲ್ಲಿ ನಾಯಕತ್ವ ಗುಣ ಹಾಗೂ ಸಮಾಜ ಸೇವೆ ಮಾಡುವಂತಹ ಮನೋಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ನಿರ್ಗಮನ ಅಧ್ಯಕ್ಷರಾದ ಡಾ.ಅನಿತಾ ದಯಾಕರ್ ಅವರು ತಮ್ಮ ಮನದಾಳದ ಮಾತನ್ನು ಆಡಿದರು.
ನೂತನ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಶ್ರೀಧರ್ ಅವರು ಮಾತನಾಡಿ ಆನ್ಸ್ ಕ್ಕಬ್ ನ ಅಧ್ಯಕ್ಷೆಯಾಗಿ ತನ್ನನ್ನು ಆಯ್ಕೆ ಮಾಡಿದ ರೋಟರಿ ಕ್ಲಬ್ ನ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಇತರ ಸ್ಥಾನಗಳಿಗೆ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಅಧಿಕಾರ ಸ್ವೀಕರಿಸಿದರು ಹಾಗೂ ಕಳೆದ ಹದಿಮೂರು ವರ್ಷಗಳಲ್ಲಿ ಆನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸದಸ್ಯೆಯರನ್ನು ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ 2024 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವ ಡಿ.ಆರ್.ಎಫ್.ಓ ಕಮಲ ಹಾಗೂ ಯುವ ಪ್ರತಿಭಾನ್ವಿತ ಕಲಾವಿದೆ ಕುಮಾರಿ ಸಿಂಚನಾ ಅವರನ್ನು ಗೌರವಿಸಲಾಯಿತು ಹಾಗೂ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳಿಗೆ ವಿಧ್ಯಾರ್ಥಿ ವೇತನವನ್ನು ನೀಡಲಾಯಿತು. ವೇದಿಕೆಯಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿ ಸಂದೇಶ್ ರಾವ್ ಉಪಸ್ಥಿತರಿದ್ದರು

ಕಾರ್ಯಕ್ರಮವು ಕುಮಾರಿ ಇಂಚರಾ ಕಾರಂತ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀಮತಿ ರಶ್ಮಿ ಪಟವರ್ಧನ್ ಹಾಗೂ ಶ್ರೀಮತಿ ವೈಷ್ಣವಿ‌ ಪ್ರಭು ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಸುಜಾತ ಅಣ್ಣಿ ಪೂಜಾರಿ, ದೀಪ್ತಿ ಹೆಗ್ಡೆ , ಸ್ಮಿತಾ ಪ್ರಶಾಂತ್ ಜೈನ್, ಮಮತಾ ಶ್ರೀನಾಥ್, ಶೋಭಾ ಗೋಪಾಲಕೃಷ್ಣ, ರಶ್ಮಿ ಆದರ್ಶ್ ಕಾರಂತ್ ಅವರು ಸಹಕರಿಸಿದರು. ನೂತನ ಕಾರ್ಯದರ್ಶಿ ಡಾ. ವಿನಯಾ ಕಿಶೋರ್ ಅವರು ವಂದಿಸಿದರು.

Related posts

ರಾಜ್ಯಮಟ್ಟದ ಬಾಲಕರ ಟೆಕ್ವಾಂಡೋ ಸ್ಪರ್ಧೆ: ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೀರ್ತೇಶ್ ತೃತೀಯ ಸ್ಥಾನ

Suddi Udaya

ಮಡವು ಸ್ವರ್ಣ ಸಂಜೀವಿನಿ ಟ್ರಸ್ಟ್ ವತಿಯಿಂದ ಕಳೆಂಜದ ನಂದಗೋಕುಲ ಗೋಶಾಲೆಯಲ್ಲಿ ಗೋಪೂಜೆ ಮತ್ತು ಗೊಗ್ರಾಸಕ್ಕೆ ನಗದು ಹಸ್ತಾಂತರ

Suddi Udaya

ಲಾಯಿಲ ಸೈಂಟ್ ಮೇರಿಸ್ ಶಾಲೆ ರಜತ ಮಹೋತ್ಸವ ಸಂಭ್ರಮ: ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಶಾಲೆಯ ಆಡಳಿತ ಮಂಡಳಿ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಪಿಲಾತಬೆಟ್ಟು ಸಂತ ಜೋಸೆಫರ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ : ಸಂಸದ ಕ್ಯಾ.ಬ್ರಿಜೇಶ್ ಚೌಟರವರಿಂದ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಉದ್ಘಾಟನೆ, ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಹಾಗೂ ಉಚಿತ ಮಧುಮೇಹ ಪರೀಕ್ಷಾ ಶಿಬಿರ

Suddi Udaya

ನ.4: ಭಜಕ ಸಹೋದರಿಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Suddi Udaya
error: Content is protected !!