ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ.) ಬೆಳ್ತಂಗಡಿ. ವಾಣಿ ಸೌಹಾರ್ದ ಕೋ – ಆಪರೇಟಿವ್ ಸೊಸೈಟಿ (ನಿ.)ಬೆಳ್ತಂಗಡಿ, ಸ್ಪಂದನಾ ಸೇವಾ ಸಂಘ, ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಇದರ ನೇತೃತ್ವದಲ್ಲಿ ಆ. 18 ವಾಣಿ ಶಿಕ್ಷಣ ಸಂಸ್ಥೆಗಳ ಹಿಂಭಾಗದ ಗದ್ದೆಯಲ್ಲಿ ನಡೆದ ಕೆಸರ್ ಕoಡೊಡು ಗೌಡೆರೆ ಗೌಜಿ -ಗಮ್ಮತ್ ಕ್ರೀಡಾಕೂಟ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ

ಮೊಗ್ರು ಗ್ರಾಮದ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಪ್ರಥಮ, ಪುರುಷರ ವಿಭಾಗ ಹಗ್ಗಜಗ್ಗಾಟ ತೃತೀಯ ಸ್ಥಾನ, ವೈಯಕ್ತಿಕ ವಿಭಾಗದಲ್ಲಿ ಅಡಿಕೆ ಹಾಳೆ ಎಳೆಯುವ ಸ್ಪರ್ಧೆಯಲ್ಲಿ ಮನ್ಕುಡೆ ಪುರಂದರ ದಂಪತಿಗಳು ತೃತೀಯ ಸ್ಥಾನ ಪಡೆದು ನಗದು ಜೊತೆಗೆ ಪ್ರಶಸ್ತಿ ಫಲಕ ಪಡೆದುಕೊಂಡರು.