24 C
ಪುತ್ತೂರು, ಬೆಳ್ತಂಗಡಿ
April 3, 2025
Uncategorized

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಕ್ಯೂಆರ್ ಕೋಡ್ ಮತ್ತು ಲೋಗೋ ಬಿಡುಗಡೆ

ಮೊಗ್ರು :ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಇಂದು  ಮಕ್ಕಳಿಗೆ ಮೂಲಭೂತ ವ್ಯವಸ್ಥೆ ಕೊರತೆ,ಸ್ಪರ್ಧಾತ್ಮಕ ಶಿಕ್ಷಣ
ವ್ಯವಸ್ಥೆಯಿಂದ ಹಾಗೂ ಇಂಗ್ಲಿಷ್ ಶಿಕ್ಷಣದ ವ್ಯಾಮೋಹದಿಂದ ಗ್ರಾಮೀಣ ಮಟ್ಟದ ಮಕ್ಕಳು ಹೊರ ಊರಿನ ಪ್ರತಿಷ್ಠಿತ ಶಾಲೆಗೆ ತೆರಳತ್ತಿರುವ ಕ
ಸರಕಾರಿ ಶಾಲೆ ಮುಚ್ಚುವ ಹಂತಕ್ಕೆ ಬಂದಿರುತ್ತದೆ.ಈ ವಿಷಯವನ್ನು ಮನಗಂಡ ಮುಗೇರಡ್ಕ ಗ್ರಾಮಸ್ಥರು ಈ ಶಾಲೆಯನ್ನು ಉಳಿಸಿ ಬೆಳೆಸುವವ ಬಗ್ಗೆ ಮುಗೇರಡ್ಕದ ಸ್ಥಳೀಯ ನಿವಾಸಿಗಳದ ಒಬ್ಬ ಯೋಗ ಗುರು,13 ಕೃಷಿಕರು,2 ಮಿಲಿಟರಿ ಸೇವೆಯಲ್ಲಿ ಇರುವರು  ಸೇರಿ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ ) ಮೊಗ್ರು ಎಂಬ ಟ್ರಸ್ಟ್ ರಚನೆ ಆಗಿರುತ್ತದೆ.ಈ ಟ್ರಸ್ಟ್ ಮೂಲಕ ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಮುಗೇರಡ್ಕ ಶಾಲೆಯನ್ನು ಅಭಿವೃದ್ಧಿ ಪಡಿಸಿ, ಮುಂದಿನ ವರ್ಷದಿಂದ ನುರಿತ ಇಂಗ್ಲಿಷ್ ಶಿಕ್ಷಕರನ್ನು ಟ್ರಸ್ಟ್ ವತಿಯಿಂದ ನೇಮಕ ಮಾಡಿಸಿ  ಸರಕಾರಿ ಕನ್ನಡಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಮಕ್ಕಳಿಗೆ ಉಚಿತವಾಗಿ ನೀಡುವುದು ಈ ಟ್ರಸ್ಟ್ ನ ಮುಂದಿನ ಉದ್ದೇಶವಾಗಿರುತ್ತದೇ.ಈ ಟ್ರಸ್ಟ್ ಈಗಾಗಲೇ ಸರಕಾರ ನಿಯಮ ಪ್ರಕಾರ ರೆಜಿಸ್ಟರ್ ಆಫೀಸ್ ಲಿ ನೋಂದಣಿವಾಗಿ ಆಗಿರುತ್ತದೆ. ಟ್ರಸ್ಟ್ ಸಾರ್ವಜನಿಕ ದೇಣಿಗೆಯನ್ನು ಬಯಸುವ ಕಾರಣ ಬ್ಯಾಂಕ್ ಖಾತೆಯನ್ನು ತೆರೆದಿದ್ದು ಇದರ QR code ನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿಗಳದ ಶ್ರೀ ಡಿ ವೀರೇಂದ್ರ ಹೆಗಡೆ ಇವರು ಬಿಡುಗಡೆ ಮಾಡಿದರು. ಹಾಗೇನೇ ಟ್ರಸ್ಟ್ ನ ಲೋಗೋ ವನ್ನು ಉಜಿರೆ laxmi industies ಮಾಲಕರದ ಶ್ರೀಯುತ ಮೋಹನ್ ಕುಮಾರ್ ಇವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಗೌಡ N ಯೋಗ ಗುರುಗಳು ಮಂಗಳೂರು, ಕಾರ್ಯದರ್ಶಿಗಳು ಶ್ರೀ ಮನೋಹರ್ ಗೌಡ ಅಂತರ, ಉಪಾಧ್ಯಕ್ಷರಾದ ಆನಂದ ಗೌಡ B ಮೊಗ್ರು, ಚಂದ್ರಹಾಸ್ ದೇವಸ್ಯ, ಕೋಶಧಿಕಾರಿಗಳಾದ ಪುರಂದರ ಗೌಡ N, ಜೊತೆ ಕಾರ್ಯದರ್ಶಿ ಉಮೇಶ್ ಗೌಡ P , ಟ್ರಸ್ಟಿಗಳಾದ ಸುಧಾಕರ್ N. ಬಾಬು ಗೌಡ. ದೀಕ್ಷಿತ್ ಎರ್ಮಲ D.ಚಂದಪ್ಪ D.S.ಕೇಶವ J ಇವರು ಉಪಸ್ಥಿತರಿದ್ದರು

Related posts

ಮಂಜುಶ್ರೀ ಮುದ್ರಣಾಲಯದ ಮೇಲ್ವಿಚಾರಕ ವಿಶ್ವನಾಥ ಶೆಟ್ಟಿಯವರಿಗೆ ಬೀಳ್ಕೊಡುಗೆ

Suddi Udaya

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ನಾಳೆ ಬೆಳ್ತಂಗಡಿಗೆ ಜಿಲ್ಲಾಧಿಕಾರಿ ಭೇಟಿ

Suddi Udaya

ಬೆಳ್ತಂಗಡಿ ಪ್ರವಾಸಿ ಮಂದಿರ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಲೋಕೋಪಯೋಗಿ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ನೆರಿಯ ಕಾರಿನ ಮೇಲೆ ಒಂಟಿ ಸಲಗ ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಎಸಿಎಫ್ ಶ್ರೀಧರ್ ಭೇಟಿ ನೀಡಿ ಪರಿಶೀಲನೆ

Suddi Udaya
error: Content is protected !!