ಉಜಿರೆ: ಕರ್ನಾಟಕ ರಾಜ್ಯ ವೆಯಿಟ್ ಲಿಫ್ಟಿಂಗ್ ಅಸೋಸಿಯೇಷನ್ ಸಂಸ್ಥೆ(ರಿ.) ಹಾಗೂ ಮೈಸೂರು ಜಿಲ್ಲಾ ವೆಯಿಟ್ ಲಿಫ್ಟಿಂಗ್ ಅಸೋಸಿಯೇಷನ್ ಸಂಸ್ಥೆ ಸಹಯೋಗದಲ್ಲಿ ಮಹಜನ ಪ್ರಥಮ ದರ್ಜೆ ಕಾಲೇಜು, ಮೈಸೂರು ಇಲ್ಲಿ ಆ. 10, 11ರಂದು ಜರಗಿದ ಪುರುಷರ ಮತ್ತು ಮಹಿಳಾ ರಾಜ್ಯ ಯೂತ್ ಜೂನಿಯರ್ ಮತ್ತು ಸೀನಿಯರ್ ವೆಯಿಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ ಎಸ್ ಡಿ ಎಮ್ ಕಾಲೇಜಿನ ತಂಡವು ಹಲವು ಪ್ರಶಸ್ತಿಯನ್ನು ಪಡೆಯಿತು.
ಬಾಲಕರ ಮೂರು ವಿಭಾಗದಲ್ಲಿ ಹಾಗೂ ಬಾಲಕಿಯರ ಮೂರು ವಿಭಾಗದಲ್ಲಿ, ಒಟ್ಟು ಆರು ತಂಡವು ಭಾಗವಹಿಸಿದೆ.
ಸೀನಿಯರ್ ಬಾಲಕರ ವಿಭಾಗ: ಮನೋಜ್- 55 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಸುಬ್ರಮಣ್ಯ – 61 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಪ್ರಜ್ವಲ್- 73 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಕವನ್- 67 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ರಜತ್ ರೈ- 81 ಕೆ.ಜಿ ಚಿನ್ನದ ಪದಕ, ಶರತ್ -81 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಅಭಿರಾಮ್ ಚಂದ್ರ- 89 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಹರ್ಷಿತ್ 109 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಯೂತ್ ಬಾಲಕರ ವಿಭಾಗ – ಪವನ್ .ಕೆ -73 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಸಮರ್ಥ- 96 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಜೂನಿಯರ್ ಬಾಲಕರ ವಿಭಾಗ– ಸಮರ್ಥ್ 96 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ, ನಿತೇಶ್- 73 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ, ಪವನ್ -73 ಕೆ.ಜಿ ವಿಭಾಗದಲ್ಲಿ ನಾಲ್ಕನೇ ಸ್ಥಾನ, ರಿತಿಕ್- 89 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಮನೋಜ್ -96 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಹರ್ಷಿತ್- 109 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಸೀನಿಯರ್ ಬಾಲಕಿಯರ ವಿಭಾಗ:
ಸ್ವಪ್ನ -59 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಸಾನಿಕ- 64 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ಸಂಗೀತ -71 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ತೇಜಸ್ವಿನಿ 81 ಕೆಜಿ ವಿಭಾಗದಲ್ಲಿ ಚಿನ್ನದ ಪದಕ, ಅಮೃತ- 49 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಯೂತ್ ಬಾಲಕಿಯರ ವಿಭಾಗ: ಅಮೃತ 49 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, 64 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಜೂನಿಯರ್ ಬಾಲಕಿಯರ ವಿಭಾಗ:
ಅಮೃತ 49ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಸ್ವಪ್ನ -59 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, 64 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಸಂಗೀತ- 71 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ತೇಜಸ್ವಿನಿ -81 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಇವರಿಗೆ ಸಂತೋಷ್ ಕುಮಾರ್ ಇವರು ತರಬೇತಿಯನ್ನು ನೀಡಿರುತ್ತಾರೆ ಹಾಗೂ ಎಸ್ ಡಿ ಎಂ ಕಾಲೇಜಿನ ಕ್ರೀಡಾ ಕಾರ್ಯದರ್ಶಿಯಾದ ರಮೇಶ್ .ಹೆಚ್ ಇವರು ಸಾಧನೆಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.