23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೆಸರ್ ಕಂಡೊಡು ಗೌಡರೆ ಗೌಜಿ-ಗಮ್ಮತ್ ಕ್ರೀಡಾಕೂಟ: ಮಚ್ಚಿನ ಗ್ರಾಮದ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ತಂಡಕ್ಕೆ ಸಮಗ್ರ ಪ್ರಶಸ್ತಿ

ಮಚ್ಚಿನ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ಸ್ಪಂದನಾ ಸೇವಾ ಸಂಘ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಇದರ ನೇತೃತ್ವದಲ್ಲಿ ಆಗಸ್ಟ್ 18ರಂದು ವಾಣಿ ಶಿಕ್ಷಣ ಸಂಸ್ಥೆಗಳ ಹಿಂಭಾಗದ ಗದ್ದೆಯಲ್ಲಿ ನಡೆದ ಕೆಸರ್ ಕಂಡೊಡು ಗೌಡರೆ ಗೌಜಿ-ಗಮ್ಮತ್ ಕ್ರೀಡಾಕೂಟ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಚ್ಚಿನ ಗ್ರಾಮದ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ವಿವಿಧ ತಂಡಗಳು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರ ಮೂಲಕ ವಿಶೇಷ ಸಾಧನೆ ಮಾಡಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಪುರುಷರ ಹಗ್ಗಜಗ್ಗಾಟ- ಪ್ರಥಮ, 35ರಿಂದ 45ವರ್ಷದೊಳಗಿನ ದಂಪತಿಗಳಿಗೆ ಅಡಿಕೆ ಹಾಳೇ ಎಳೆಯುವುದು ಪ್ರಥಮ, ನೂತನ ದಂಪತಿಗಳಿಗೆ ಉಪ್ಪಿನ ಮುಡಿ ಓಟ ವೀಕ್ಷಿತ್ ಕೀರ್ತಿಕ ದಂಪತಿಗಳು ಮಚ್ಚಿನ ದ್ವಿತೀಯ, 8ರಿಂದ 10ನೇ ತರಗತಿ ಬಾಲಕಿಯರ ರಿಲೇ ಓಟ ಮಚ್ಚಿನ ದ್ವಿತೀಯ, 5ರಿಂದ 7ನೇ ತರಗತಿ ಬಾಲಕಿಯರ ರಿಲೇ ಓಟ ದ್ವಿತೀಯ, 5ರಿಂದ 7ನೇ ತರಗತಿ ಬಾಲಕರ ರಿಲೇ ಓಟ ಪ್ರಥಮ. ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Related posts

ಮನೆಗೆ ಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತೆರವು ಕಾರ್ಯ

Suddi Udaya

ನಾವೂರು: ನಮನ ಟ್ರೇಡರ್‍ಸ್ ಶುಭಾರಂಭ

Suddi Udaya

ವೇಣೂರು: ಕ್ಷೇತ್ರದಲ್ಲಿ ಸರ್ವಜ್ಞ ವಾಣಿ ವೆಬ್ ಸೈಟ್ ಅನಾವರಣ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ ಧರ್ಮಾಧ್ಯಕ್ಷರ ಪೀಠಾರೋಹಣ ವರ್ದಂತಿ: ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಶುಭಾಶಯ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಂದ ಡಾ.ಹೆಗ್ಗಡೆ ಹಾಗೂ ಕನ್ಯಾಡಿ ಶ್ರೀ ಭೇಟಿ

Suddi Udaya
error: Content is protected !!