ಕೊಯ್ಯೂರು : ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆ.20 ರಂದು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ದಯಾಮಣಿ ರವರ ಅಧ್ಯಕ್ಷತೆಯಲ್ಲಿ ಪಂಚದುರ್ಗಾ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಸಾಮಾಜಿಕ ಅರಣ್ಯ ಇಲಾಖೆ, ವಲಯ ಅರಣ್ಯಾಧಿಕಾರಿ ರವಿಕುಮಾರ್ ರವರು ಗ್ರಾಮ ಸಭೆಯನ್ನು ಮುನ್ನಡೆಸಿದರು.
ಕೊಯ್ಯೂರು 4ನೇ ವಾರ್ಡ್ ಬಜಿಲ ಶಾಲೆಗೆ ಎಷ್ಟು ಅನುದಾನ ಇಟ್ಟಿದೀರಿ? ಶಾಲೆ ಬೀಳುವ ಹಂತದಲ್ಲಿದೆ ಎಂದು ಗ್ರಾಮಸ್ಥರು ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಗೆ ಪ್ರಶ್ನಿಸಿದರು.
ಗ್ರಾಮ ಪಂಚಾಯತ್ ವತಿಯಿಂದ ಕೊಯ್ಯೂರು ಸಾಂತ್ಯೋಡಿಯಲ್ಲಿ ಉತ್ತಮವಾದ ಬಸ್ಸ್ಟ್ಯಾಂಡ್ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರಾದ ರಮೇಶ್ ಪಂಚಾಯತ್ ಗೆ ಅಭಿನಂದಿಸಿದರು. ಗ್ರಾಮಸ್ಥರಾದ ಸಿದ್ದೀಕ್, ಕಳೆದ ಕೆಲ ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಪ್ರಶಂಸಿಸಿದರು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಹರೀಶ್, ಸದಸ್ಯರಾದ ಜಗನ್ನಾಥ, ದಿವ್ಯ, ಗಿರೀಶ, ಯಶವಂತ, ಶಾರದಾ, ವಿಶಾಲಾಕ್ಷಿ, ಲೋಕೇಶ, ಹೇಮಾವತಿ, ಇಸುಬು, ಕೆ. ಚಂದ್ರಾವತಿ, ಸುಮಿತಾ ವಿವಿಧ ಹಾಗೂ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಕಾರ್ಯದರ್ಶಿ ಪರಮೇಶ್ವರ ಜಮಾಖರ್ಚು ಮಂಡಿಸಿದರು. ಪಂ. ಸದಸ್ಯ ಯಶವಂತ ಗೌಡ ಧನ್ಯವಾದವಿತ್ತರು.