26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆ 21: ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬೆಳ್ತಂಗಡಿಗೆ

ಬೆಳ್ತಂಗಡಿ: ಜೆಸಿಐ ಭಾರತದ ಅಮೃತ ಮಹೋತ್ಸವ ವರ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಡ್ವಕೇಟ್ ಸಿ.ಆರ್ ರಿಕೇಶ್ ಶರ್ಮಾರವರು ಆ. 21 ರಂದು ಬೆಳ್ತಂಗಡಿಗೆ ಆಗಮಿಸಲಿದ್ದಾರೆಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ ತಿಳಿಸಿದ್ದಾರೆ.

ಜಿಸಿಐ ವಲಯ 15ರ ಅಧಿಕೃತ ಭೇಟಿಯನ್ನು ಆಗಸ್ಟ್ 21 ಮತ್ತು 22ರಂದು ಹಮ್ಮಿಕೊಂಡಿದ್ದು ಆ. 21ನೇ ಬುಧವಾರ 11 ಘಂಟೆಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬಳಂಜ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಶಾಶ್ವತ ಯೋಜನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜೊತೆಗೆ ವಲಯ 15ರ ಅಧ್ಯಕ್ಷರಾದ ಅಡ್ವಕೇಟ್ ಗಿರೀಶ್ ಎಸ್ ಪಿ, ಉಪಾಧ್ಯಕ್ಷರಾದ ಶಂಕರ್ ರಾವ್ ಹಾಗೂ ವಲಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

Related posts

ಐಡಿಎಫ್ ಡಾಡ್ಜ್ ಬಾಲ್ ಫೇಡರೇಷನ್ ಕಪ್ 2024 ಪಂದ್ಯಾಟದಲ್ಲಿ ಅಭಿಶೃತ್ ಇಳಂತಿಲ ಇವರ ನಾಯಕತ್ವದ ಕರ್ನಾಟಕ ತಂಡಕ್ಕೆ ತೃತೀಯ ಪ್ರಶಸ್ತಿ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.1.85ಕೋಟಿ ನಿವ್ವಳ ಲಾಭ, ಶೇ.14 ಡಿವಿಡೆಂಟ್ ಘೋಷಣೆ

Suddi Udaya

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಮತ ಬೇಟೆ

Suddi Udaya

ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ” ವಾಮದಪದವು ಶಾಖೆ ಶುಭಾರಂಭ

Suddi Udaya

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ಕಾಜೂರು ಹಯಾತುಲ್ ಔಲಿಯಾ ದರ್ಗಾ ಶರೀಫ್ ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

Suddi Udaya

ಧರ್ಮಸ್ಥಳ: ದೊಂಡೋಲೆ ನಿವಾಸಿ ಪುಂಡಲೀಕ ಪ್ರಭು ನೇಣು ಬಿಗಿದುಕೊಂಡು ಆತ್ಮಹತ್ಯೆ

Suddi Udaya
error: Content is protected !!