24.4 C
ಪುತ್ತೂರು, ಬೆಳ್ತಂಗಡಿ
May 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭ ಹಾಗೂ ವಿಶ್ವ ಫೋಟೋಗ್ರಾಫರ್ಸ್‌ ದಿನಾಚರಣೆ

ಉಜಿರೆ : ಫೋಟೋಗ್ರಫಿಯ ವೃತ್ತಿಯಲ್ಲಿ ಯಾವ ಸಂಧರ್ಭದಲ್ಲಿ, ಯಾವ ಉದ್ದೇಶ ಯಾವ ಸಮಯದಲ್ಲಿ ಭಾವನೆಗಳನ್ನು ನೋಡಿ ಫೋಟೋ ತೆಗೆಯು ಜಾಣ್ಮೆಯನ್ನು ಹೊಂದಿರುವುದು ಬಹುಮುಖ್ಯ. ಫೋಟೋಗ್ರಫಿ ಬಹಳ ಗಂಭೀರವಾದ ವಿಷಯ ಎಲ್ಲ ಕಡೇ ದಾಖಲೆಯಾಗಿ ಬಳಸುದಂತಾಗಿದೆ. ಇನ್ನೂ ಫೋಟೋಗ್ರಫಿಯಲ್ಲಿ ಬೆಳಕಿನ ಮಹತ್ವವನ್ನು ತಿಳಿದುಕೊಳ್ಳಬೇಕು, ಯಾವ ಬೆಳಕಿನಲ್ಲಿ ಯಾವ ರೀತಿಯ ಫೋಟೋ ತೆಗೆಯಬೇಕು, ಫೋಟೋ ತೆಗೆಯುವ ಮೊದಲು ಮೂಡ್‌ ಅನ್ನು ಗಮನಿಸಬೇಕು ಆವಾಗ ಮಾತ್ರ ಸುಂದರವಾದ ಫೋಟೋ ಮೂಡಿಬರುತ್ತದೆ. ಅಲ್ಲದೇ ಆಲ್ಬಾಮ್‌ ಮಾಡುವಾಗ ಹತ್ತು ಸರಿ ನೋಡುವ ರೀತಿಯಲ್ಲಿ ತಯಾರಿಸಬೇಕು. ಇವತ್ತು ವಿವಿಧ ರೀತಿಯ ಪ್ರಿಂಟಿಂಗ್‌ ಪೇಪರ್‌ ಬಂದಿದೆ ಅದರ ಜ್ಞಾನ ಇರಲಿ. ಜೀವನದಲ್ಲಿ ಶಿಸ್ತು ಕಲಿತ್ತಿದ್ದೀರಿ, ಬದುಕಿನಲ್ಲಿ ಶಿಸ್ತು ಸಹ ಮುಖ್ಯ ಅದನ್ನು ಮುಂದುವರೆಯಿಸಿಕೊಳ್ಳಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ರುಡ್‌ ಸೆಟ್‌ ಸಂಸ್ಥೆಗಳ ಅಧ್ಯಕ್ಷ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.


ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ *ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭ ಹಾಗೂ ವಿಶ್ವ ಫೋಟೋಗ್ರಾಫರ್ಸ್‌ ದಿನಾಚರಣೆಯಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತ್ತರಿಸಿ, ಧರ್ಮಸ್ಥಳದ ಮ್ಯೂಸಿಯಂನಲ್ಲಿ ಸುಮಾರು 700 ಕ್ಯಾಮರಾಗಳು ಇವೆ. ಇದು ಪೋಟೋಗ್ರಾಫಿಯಲ್ಲಿ ಕ್ಯಾಮರಗಳ ಮೌಲ್ಯ ವರ್ಧನೆಯನ್ನು ತೋರಿಸುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ಬೆಳವಣಿಗೆಯನ್ನು ನಿಮ್ಮ ಬುದ್ದಿವಂತಿಕೆಯಲ್ಲಿ ಮಾಡಿಕೊಳ್ಳಬೇಕು ಎಂದು ತಿಳಸಿ ಶುಭ ಹಾರೈಸಿದರು.


ಸಮಾರಂಭದ ವೇದಿಕೆಯಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ. ಎನ್‌ ಜರ್ನಾಧನ ಭಾಗವಹಿಸಿ, ರುಡ್‌ ಸೆಟ್‌ ಸಂಸ್ಥೆಯು ಬೆಳದು ಬಂದ ದಾರಿಯನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ಭಾಗವಹಿದ್ದರು.
ಪೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ತರಬೇತಿಯ ಅತಿಥಿ ಉಪನ್ಯಾಸಕರಾದ ಸೂರ್ಯಪ್ರಕಾಶ ಉಪಸ್ಥಿತರಿದ್ದರು.
ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 31 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು, ಹೇಮಂತ್ ಪ್ರಾರ್ಥನೆ ಮಾಡಿದರು, ಜಯರಾಮ್‌, ಸಿದ್ಧಾರ್ಥ ತರಬೇತಿಯ ಅನುಭವ ಹಂಚಿಕೊಂಡರು.

Related posts

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಸಮೃದ್ದ್ ನಿಟ್ಟಡೆ ತೇರ್ಗಡೆ

Suddi Udaya

ಹೊಸಂಗಡಿಯಲ್ಲಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ

Suddi Udaya

ವೇಣೂರು ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಗುರುವಾಯನಕೆರೆ : ಸ.ಹಿ.ಪ್ರಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ವೇಣೂರು ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಆಯ್ಕೆ

Suddi Udaya

ಚಾರ್ಮಾಡಿ ಮಠದಮಜಲು ಹತ್ತಿರ ಇಂದ್ ಮರವನ್ನು ದೂಡಿ ಹಾಕಿದ ಆನೆ ವಿದ್ಯುತ್ ಫೀಡರ್ ಗೆ ಹಾನಿ: ದುರಸ್ತಿ ಪಡಿಸಿದ ಮೆಸ್ಕಾಂ ಇಲಾಖೆ

Suddi Udaya
error: Content is protected !!