ಧರ್ಮಸ್ಥಳ : “ಮಗುವೊಂದು ಕಲಿತರೆ ಶಾಲೆಯೊಂದು ತೆರೆದಂತೆ “ಎಂಬ ನಾಣ್ಣುಡಿಯಂತೆ ಮಕ್ಕಳು ಶಾಲೆಗೆ ಬರಲು ಯಾವುದೇ ರೀತಿಯ ತೊಂದರೆಯಗಬಾರದು ಎಂಬ ಉದ್ದೇಶದಿಂದ ಕೊಪ್ಪ ಒಬ್ಬ ಸಾಮಾನ್ಯ ರೈತನಾದ ಗೋಪಾಲ ಎ. ಜಿ. ಎಸ್. ಎಂ ಎಂಬವವರು ಇಂದು ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳ ಕ್ಕೆ ಭೇಟಿ ನೀಡಿ ಒಂದು ದೊಡ್ಡ ಗಡಿಯಾರವನ್ನು ಕೊಡುಗೆಯಾಗಿ ನೀಡಿದ್ದಾರೆ.
ಇವರು ಪ್ರತಿವರ್ಷ ಸರಕಾರಿ ಶಾಲೆಗಳಿಗೆ ನೋಟ್ ಪುಸ್ತಕ, ಗಡಿಯಾರ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡುವ ಹವ್ಯಾಸವನ್ನು ಕಳೆದ 18 ವರ್ಷಗಳಿಂದ ಮಾಡುತ್ತಿದ್ದು ಇವರಿಗೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಇರಲಿ ಎಂಬ ಹಾರೈಕೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಕಮಲ್ ತೇಜು ರಜಪೂತ ಮತ್ತು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.