30.7 C
ಪುತ್ತೂರು, ಬೆಳ್ತಂಗಡಿ
May 17, 2025
ಸಮಸ್ಯೆ

ನಿನ್ನೆ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಕಂಡುಬಂದ ಹಲವೆಡೆ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ

ಬೆಳ್ತಂಗಡಿ :ನಿನ್ನೆ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಕಂಡುಬಂದು ಹಲವೆಡೆ ಹಾನಿಗೊಳಗಾದ ಮಲವಂತಿಗೆ ಗ್ರಾಮದ ಮಲ್ಲ ನಂದಿಕಾಡು ರಸ್ತೆ, ಕೊಟರಿಮಾರ್ ಅರ್ತಿದಡಿ ಹರೀಶ್ ಗೌಡ ಅವರ ಮನೆ, ಕಜಕೆ ನೇಲೆಕ್ಕಿಲ್ ನಾರಾಯಣ ಮಲೆಕುಡಿಯ ಮನೆಗೆ, ಕಜಕೆ ಶಾಲೆ, ಪಂಚಾಯತ್, ಮಿತ್ತಬಾಗಿಲು ಗ್ರಾಮದ ಬಿರ್ಮನೊಟ್ಟು ತಡೆಗೋಡೆ ಹಾನಿ ಸ್ಥಳ, ರಾಜಪ್ಪ ಗೌಡರ ಮನೆ, ಮಿತ್ತಬಾಗಿಲು ಗುತ್ತು ಮನೆಯ ತೋಟಕ್ಕೆ ಹಾನಿ, ಕೂಡಬೆಟ್ಟು ಸದಾಶಿವ ದೇವಸ್ಥಾನ, ಪಿಲತ್ತಡಿ ದಡ್ಡು, ಕುಕ್ಕಾವು ಸೇತುವೆ, ಬೊಳ್ಳಾಜೆ ಮೋರಿ ಕುಸಿತ ಸ್ಥಳಕ್ಕೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಆ. 20ರಂದು ಭೇಟಿ ಸೂಕ್ತ ಪರಿಹಾರ ಒದಗಿಸುವಂತೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಜೈನ್, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಯ ಗೌಡ, ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಕರಣಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು

Related posts

ಸುಲ್ಕೇರಿಯಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Suddi Udaya

ನಾವೂರು: ಕಿರ್ನಡ್ಕ ಜನತಾ ಕಾಲೋನಿ ಬಳಿ ರಸ್ತೆಗುರುಳಿದ ಅಕೇಶಿಯದ ಮರ

Suddi Udaya

ಎಸ್‌ಡಿಪಿಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಕುಂಟಿನಿ-ಕುತ್ರೊಟ್ಟು ರಸ್ತೆ ದುರಸ್ತಿ ಆಗ್ರಹಿಸಿ ಬೃಹತ್ ಪ್ರತಿಭಟನೆ

Suddi Udaya

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಹೂವಿನ ವ್ಯಾಪಾರಿ ಶಿವರಾಮ್: ಕೆಇಬಿ ಭಾಸ್ಕರ್ ಗುರುಸ್ವಾಮಿ ಇವರ ನೇತೃತ್ವದಲ್ಲಿ ಸಂಗ್ರಹಿಸಿದ ರೂ. 53,011 ವೈದ್ಯಕೀಯ ನೆರವು ಹಸ್ತಾಂತರ

Suddi Udaya

ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಆನಂದ ಪಾದೆ ರವರಿಗೆ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿಯಿಂದ ಚಿಕಿತ್ಸಾ ನೆರವು

Suddi Udaya

ಪೆರ್ಲ ಬೈಪಾಡಿ ಹಿ.ಪ್ರಾ. ಶಾಲೆಯ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ

Suddi Udaya
error: Content is protected !!