ಬೆಳ್ತಂಗಡಿ: ಇಲ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಜೇನು ಕೃಷಿ ಹಾಗೂ ಜೇನಿನ ಮೌಲ್ಯವರ್ಧನೆ ಎಂಬ ವಿಷಯದ ಬಗ್ಗೆ ಎರಡು ದಿನಗಳ ಸಾಂಸ್ಥಿಕ ತರಬೇತಿಯನ್ನು ಆ. 21 22, ರಂದು ಪೂರ್ವಾಹ್ನ 10 ಘಂಟೆಯಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಶ್ಯಾಮ್ ಸುಂದರ ಭಟ್, ಪ್ರಗತಿಪರ ಜೇನು ಉದ್ದಿಮೆದಾರರು, ಮಧುಮಕ್ಷಿಕ, ಅಲ್ಲಡ್ಕ ಬೆಳ್ತಂಗಡಿ ಮತ್ತು ಪ್ರಗತಿಪರ ರೈತರಾದ ಪ್ರಭಾಕರ ಮಯ್ಯ ಸುರ್ಯ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಮೊಬೈಲ್ ತಂತ್ರಾಂಶವನ್ನು ಬಳಸುವ ಬಗ್ಗೆ ಮಾಹಿತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ರೈತ ಬಾಂಧವರಿಗೆ ಟೀ/ಕಾಫಿ, ಊಟದ ವ್ಯವಸ್ಥೆ ಇರುತ್ತದೆ. ಭಾಗವಹಿಸುವ ರೈತರು ಖಡ್ಡಾಯವಾಗಿ ಎಫ್ ಐ ಡಿ ಅಥವಾ ಚುನಾವಣಾ ಗುರುತಿನ ಚೀಟಿಯನ್ನು ತರುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.