24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

ಉಜಿರೆ: ರತ್ನಮಾನಸ ವಸತಿ ನಿಲಯದಲ್ಲಿ ನಡೆಸಲಾದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಶ್ರೀ ಧ ಮಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಸಂಪತ್ ಕುಮಾರ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಆಧುನಿಕ ಕಾಲದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ ಗಳು ನವೀಕರಣಗೊಂಡಂತೆ ನಾವು ಕೂಡ ಜೀವನದಲ್ಲಿ ನವೀನತೆಯನ್ನು ಹೊಂದುವುದು ಅನಿವಾರ್ಯ. ರಕ್ಷಾ ಬಂಧನದ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದರೊಂದಿಗೆ ನಮ್ಮ ಕುಟುಂಬ ನಮ್ಮ ದೇಶದ ರಕ್ಷಣೆ ಕೂಡ ನಮ್ಮ ಕರ್ತವ್ಯವಾಗಿದೆ. ಈ ರಕ್ಷಣೆಗೆ ಪ್ರೀತಿ ವಾತ್ಸಲ್ಯ ಸಹೋದರತೆ ಭ್ರಾತೃತ್ವತೆ ಸಹಬಾಳ್ವೆಯ ಧಾರೆಗಳನ್ನು ಸೇರಿಸಿಕೊಂಡು ರಕ್ಷಿಸಬೇಕಾಗುತ್ತದೆ ಎಂದರು.


ದೇಶವನ್ನು ಕಾಯುವ ಸೈನಿಕರು ಗನ್ ನ್ನು ಹಿಡಿದರೆ ವಿದ್ಯಾರ್ಥಿಗಳಿಗೆ ಭೋದನೆ ಮಾಡುವ ಶಿಕ್ಷಕರು ಪೆನ್ನನ್ನು ಹಿಡಿದು ದೇಶವನ್ನು ರಕ್ಷಿಸುತ್ತಾರೆ. ಎಂದು ಕಥೆಗಳ ಮೂಲಕ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು.

ದೀಪ ಪ್ರಜ್ವಲನೆ ಮಾಡಿದ ಡಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿ ಕೆ.ವಿ ಯವರು ಮನುಷ್ಯನು ಜೀವನದಲ್ಲಿ ಮೌಲ್ಯಗಳನ್ನು ಬೇಳೆಸಬೇಕು ನಾವೆಲ್ಲರೂ ಭಾರತೀಯರು ಎಂಬ ಭಾಂದವ್ಯ ಬೆಳೆಸಿಕೊಳ್ಳುತ್ತ ರಕ್ಷಾ ಬಂಧನವನ್ನು ಆಚರಿಸಬೇಕೆಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರತ್ನಮಾನಸ ನಿಲಯದ ಪಾಲಕರಾದ ಯತೀಶ್ ಕೆ ಬಳಂಜರವರು ದೀಪಗಳು ಉರಿಯ ಬೇಕಾದರೆ ಎಷ್ಟು ಮಹತ್ವವೊ ಹಾಗೆನೇ ವಿದ್ಯಾರ್ಥಿಗಳು ದೇಶದ ರಕ್ಷಣೆ ಗೆ ಆದರ್ಶ ವ್ಯಕ್ತಿ ಗಳಾಗಿರಬೇಕೆಂದರು.

ವಿದ್ಯಾರ್ಥಿ ವಿನಾಯಕ ರವರು ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಿ ನಿಲಯದ ಅಧ್ಯಾಪಕರಾದ ರವಿಚಂದ್ರರವರು ಸ್ವಾಗತಿಸಿ ಉದಯ ರಾಜ್ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿ ನಿಶೀತ್ ರವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಡಿ ಎಡ್ ಕಾಲೇಜ್ ನ ಉಪನ್ಯಾಸಕರಾದ ಮಂಜು ಯು ಆರ್, ರತ್ನ ಮಾನಸದ ಸಿಬ್ಬಂದಿಗಳಾದ ದೀಪಕ್ ಕೆ ,ಮಾಣಿಕ್ಯರಾಜ್, ಉದಯಕುಮಾರ್, ಮಹೇಂದ್ರ ರವರು ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ಶಿಕ್ಷಕರು ಪರಸ್ಪರ ಎದುರೆದುರು ಕುಳಿತುಕೊಂಡು ರಕ್ಷೆಯನ್ನು ಕಟ್ಟಿ ಸಿಹಿಯನ್ನು ಕೊಡುವುದರೊಂದಿಗೆ ರಕ್ಷಾ ಬಂಧನವನ್ನು ಆಚರಿಸಲಾಯಿತು.

Related posts

ಶಿಬರಾಜೆ ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ : ಮರ ಸಹಿತ ಗುಡ್ಡ ಕುಸಿತ ತೆರವು

Suddi Udaya

ನಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಲಕ್ಷ್ಮಿಗೆ ಶ್ರದ್ಧಾಂಜಲಿ ಸಮರ್ಪಣೆ

Suddi Udaya

ಬ್ರಹ್ಮ ಶ್ರೀ ನಾರಾಯಣ ಗುರುಗಳ 169ನೇ ಜಯಂತಿಯ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಯವರಿಗೆ ಸನ್ಮಾನ

Suddi Udaya

ಕುಂದಾಪುರ : ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ: ಪಡಂಗಡಿ ನಡಿಬೆಟ್ಟು ನೇಮಿರಾಜ ಶೆಟ್ಟಿಯವರ ಮೊಮ್ಮಗ ಪ್ರದ್ಯೋತ್ ಮೃತ್ಯು

Suddi Udaya

ಕೊಕ್ಕಡ: ಅನುಚಿತ ವರ್ತನೆ, ಹಲ್ಲೆ ಆರೋಪ: ಕೊಕ್ಕಡ ಹಾಗೂ ನೆಲ್ಯಾಡಿ ಮಹಿಳೆಯರಿಂದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!