23.5 C
ಪುತ್ತೂರು, ಬೆಳ್ತಂಗಡಿ
April 4, 2025
ಪ್ರಮುಖ ಸುದ್ದಿ

ವರದಕ್ಷಿಣೆ ಕಿರುಕುಳಕ್ಕೆ ಮಲವಂತಿಗೆ ಗ್ರಾಮದ ವಿವಾಹಿತೆ ಬಲಿ

ಬೆಳ್ತಂಗಡಿ: ವರದಕ್ಷಿಣೆ ಕಿರುಕುಳಕ್ಕೆ ಮಲವಂತಿಗೆ ಗ್ರಾಮದ ವಿವಾಹಿತೆ ಬಲಿಯಾಗಿರುವ ಬಗ್ಗೆ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಲಾಗಿದ್ದು ಕೇಸು ದಾಖಲಾಗಿದೆ.
ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಭಿಕ್ಷಾ (25) ಮೃತ ದುರ್ದೈವಿ.

ಮಲವಂತಿಗೆ ಗ್ರಾಮದ ಚೆನ್ನೆಗೌಡರ ಮಗಳಾಗಿರುವ ಸುಭಿಕ್ಷಾ ಅವರನ್ನು ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷದ ಒಂದು ಗಂಡು ಮಗುವಿದೆ. ಆ.19ರಂದು ಸಂಜೆ 4 ಗಂಟೆಗೆ ಸುಭಿಕ್ಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಂಡ ಪ್ರವೀಣ್‌, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮಗಳಿಗೆ ವರದಕ್ಷಿಣೆ ನೀಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿ ನೀಡಿದ ದೂರಿನಂತೆ. ಸುಭೀಕ್ಷಾ ಗಂಡ ಪ್ರವೀಣ್, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸುಬ್ರಹ್ಮಣ್ಯದಲ್ಲಿ ಡೆಂಗು ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತಾ ಕಾರ್ಯ

Suddi Udaya

ಬೆಳ್ತಂಗಡಿ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ಮಕ್ಕಳ ಗ್ರಾಮ ಸಭೆ

Suddi Udaya

ಉಜಿರೆ: ಅನುಗ್ರಹ ಶಾಲಾ ವಾರ್ಷಿಕ ಕ್ರೀಡಾಕೂಟ

Suddi Udaya

ಬಂದಾರು: ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

Suddi Udaya

ಕುದ್ರೋಳಿ‌ ಕ್ಷೇತ್ರದ ನಿರ್ಮಾತೃ ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ‌ ಸದಸ್ಯರು

Suddi Udaya
error: Content is protected !!