ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬಳಂಜ ಶಾಲೆಗೆ ಭೇಟಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಬಳಂಜ ಶಾಲೆಗೆ ರೂ.1ಲಕ್ಷ ಮೊತ್ತದ ಯೋಜನೆಗಳ ಹಸ್ತಾಂತರ

Suddi Udaya

ಬೆಳ್ತಂಗಡಿ: ಜೆಸಿಐ ಭಾರತದ ಅಮೃತ ಮಹೋತ್ಸವ ವರ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಡ್ವಕೇಟ್ ಸಿ.ಆರ್ ರಿಕೇಶ್ ಶರ್ಮಾರವರು ಆ. 21 ರಂದು ಬಳಂಜ ಶಾಲೆಗೆ ಭೇಟಿ ನೀಡಿದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬಳಂಜ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ 1ಲಕ್ಷ ಮೊತ್ತದ ಶಾಶ್ವತ ಯೋಜನೆಗಳನ್ನು ಹಸ್ತಾಂತರ ಮಾಡಿದರು.

ಬಳಂಜ ಮತ್ತು ಅಟ್ಲಾಜೆ ಶಾಲೆಗೆ ಕಂಪ್ಯೂಟರ್ ಹಸ್ತಾಂತರ, ಬಳಂಜ ಶಾಲೆ ಮತ್ತು ಕಾಪಿನಡ್ಕ ರಸ್ತೆಗೆ ಬ್ಯಾರಿಕೇಡ್ ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ ವಹಿಸಿದ್ದರು.

ವೇದಿಕೆಯಲ್ಲಿ ವಲಯ 15ರ ಅಧ್ಯಕ್ಷರಾದ ಅಡ್ವಕೇಟ್ ಗಿರೀಶ್ ಎಸ್ ಪಿ, ಉಪಾಧ್ಯಕ್ಷರಾದ ಶಂಕರ್ ರಾವ್, ವಲಯ ಅಧಿಕಾರಿಗಳಾದ ಅಭಿಲಾಶ್,ಸತೀಶ್ ಪೂಜಾರಿ, ಬಳಂಜ ಶಾಲಾ ಮುಖ್ಯೋಪಾಧ್ಯಾಯರಾದ ಸುಲೋಚನ,ರೆನಿಲ್ಡಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೆಸಿಐ ರಾಷ್ಟ್ರೀಯ ಅಧ್ಯಕ್ಷರನ್ನು ಬಳಂಜ ಶಾಲೆ,ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಾಗೂ ಊರವರ ಪರವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷರುಗಳು,ಪಧಾಧಿಕಾರಿಗಳು,ಸದಸ್ಯರು, ಊರವರು, ಸಂಘ ಸಂಸ್ಥೆಗಳ ಪ್ರಮುಖರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೂರ್ವಾಧ್ಯಕ್ಷ ಪ್ರಸಾದ್ ಬಿ.ಎಸ್ ವೇದಿಕೆ ಆಹ್ವಾನಿಸಿದರು,ಮಹಿಳಾ ಜೆಸಿ ಸಂಯೋಜಕಿ ಶೃತಿ ರಂಜಿತ್ ಜೆಸಿವಾಣಿ ಉದ್ಘೋಷಿಸಿದರು, ಪೂರ್ವಾಧ್ಯಕ್ಷ ಪ್ರಶಾಂತ್ ಲಾಯಿಲ ವಂದಿಸಿದರು.

Leave a Comment

error: Content is protected !!