ಮಾಲಾಡಿ : ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆ.21ರಂದು ರಂದು ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಸಾಮಾಜಿಕ ಅರಣ್ಯ ಇಲಾಖೆ, ವಲಯ ಅರಣ್ಯಾಧಿಕಾರಿ ರವಿಕುಮಾರ್ ರವರು ಗ್ರಾಮ ಸಭೆಯನ್ನು ಮುನ್ನಡೆಸಿದರು.
ಪುಂಜಾಲಕಟ್ಟೆ – ಪುರಿಯ ರಸ್ತೆ ಎಂಟು ವರ್ಷದಿಂದ ಮರುಡಾಮರೀಕರಣ ಆಗಿಲ್ಲ. ರಸ್ತೆ ಕಾಮಗಾರಿ ಆಗದಿದ್ದಲ್ಲಿ ಧರಣಿ ಕೂರುವುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯನ್ನು ಗ್ರಾಮಸ್ಥರು ಸರಿಪಡಿಸುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ರವರ ನೇತೃತ್ವದಲ್ಲಿ ರಸ್ತೆಯು ತಾತ್ಕಾಲಿಕವಾಗಿ ಹೋಗುವ ವ್ಯವಸ್ಥೆಯಾಗಿದ್ದು ಗ್ರಾಮಸ್ಥರು ಅವರ ಕೆಲಸವನ್ನು ಪ್ರಶಂಸಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಸೆಲೆಸ್ಟಿನ್ ಡಿಸೋಜಾ, ಸದಸ್ಯರಾದ ಶ್ರೀಮತಿ ಸುಸ್ಸುನಾ ಡಿಸೋಜಾ , ದಿನೇಶ್ ಕರ್ಕೆರಾ, ಎಸ್ ಬೇಬಿ ಸುವರ್ಣ , ಸುಧಾಕರ ಆಳ್ವ, ಉಮೇಶ್, ಬೆನಡಿಕ್ಟ್ ಮಿರಾಂದ, ವಸಂತ ಪೂಜಾರಿ, ಶ್ರೀಮತಿ ತುಳಸಿ.ಬಿ, ರಾಜೇಶ್, ಶ್ರೀಮತಿ ಐರಿನ್ ಮೋರಾಸ್, ಶ್ರೀಮತಿ ಫರ್ಝಾನ, ಶ್ರೀಮತಿ ವಿದ್ಯಾ ಪಿ ಸಾಲಿಯಾನ್ ಶ್ರೀಮತಿ ರುಬೀನಾ, ಶ್ರೀಮತಿ ಗುಲಾಬಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಂ. ಅಭಿವೃದ್ಧಿ ಅಧಿಕಾರಿ ಕೆ. ರಾಜಶೇಖರ್ ರೈ ಸ್ವಾಗತಿಸಿ, ಅನುಪಾಲನ ವರದಿ ಹಾಗೂ ಜಮಾಖರ್ಚಿನ ವಿವರ ಮಂಡಿಸಿದರು. ಕಾರ್ಯದರ್ಶಿ ಯಶೋಧರ ಶೆಟ್ಟಿ ಧನ್ಯವಾದವಿತ್ತರು.