23.5 C
ಪುತ್ತೂರು, ಬೆಳ್ತಂಗಡಿ
April 4, 2025
ಧಾರ್ಮಿಕ

ದಾರುಸ್ಸಲಾಂ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಇದರನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ದಾರುಸ್ಸಲಾಂ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಇದರ
ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಕಕ್ಕಿಂಜೆ ಚಿಬಿದ್ರೆಯಲ್ಲಿ ನಡೆಯಿತು.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ರವರು ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೇರವೇರಿಸಿ ಕ್ಯಾಂಪಸ್ ಗೆ ವಾದಿ ಸಲಾಮತಿ ವಲ್ ಹುದಾ ಎಂದು ನಾಮಕರಣ ಮಾಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ರವರ ನೇತೃತ್ವದಲ್ಲಿ ದಾರುಸ್ಸಲಾಂ ಸಂಸ್ಥೆಯು ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತಿದ್ದು ಚಿಬಿದ್ರೆಯಲ್ಲಿ ಆರಂಭಗೊಳ್ಳುವ ಸಂಸ್ಥೆಯು ಮಹತ್ತರ‌ ಯೋಜನೆಯಲ್ಲಿ ಎಲ್ಲರೂ ಕೈಜೋಡಿಸಬೇಕು ಸಹಾಯ ಸಹಕಾರ ಮಾಡುವ ಎಲ್ಲರನ್ನೂ ದೇವರು ಅನುಗ್ರಹಿಸಲಿ ಎಂದರು
ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ. ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ.
ದಾರುಸ್ಸಲಾಂ ಆಡಳಿತ ಸಮಿತಿಯ ಪದಾಧಿಕಾರಿಗಳು, ದುಬೈ, ಅಬುಧಾಬಿ, ಶಾರ್ಜಾ ಸಮಿತಿಯ ಪ್ರತಿನಿಧಿಗಳು, ಸ್ವಾಗತ ಸಮಿತಿಯ ನೇತಾರರು ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು.

Related posts

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಸುನ್ನತ್ (ಮುಂಜಿ) ಕಾರ್ಯಕ್ರಮ

Suddi Udaya

ಫೆ.17-26: ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ

Suddi Udaya

ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರದಲ್ಲಿ ಸಾನಿಧ್ಯ ದೈವಗಳ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ

Suddi Udaya

ಜಮಲಾಬಾದ್ ಇದ್ಗದಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಾನಕ್ಕೆ ಶಿಲಾಮಯ ಧ್ವಜಸ್ತಂಭ: ಕಿಲ್ಲೂರು ಪೇಟೆಯಿಂದ ಕಾಲ್ನಡಿಗೆಯ ಮೆರವಣಿಗೆ

Suddi Udaya
error: Content is protected !!