ಬೆಳ್ತಂಗಡಿ: ನೇತಾಜಿ ಸುಭಾಶ್ ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ಮುಗುಳಿ ಶಾಲೆಗೆ ಆವರಣ ಗೋಡೆ ನಿರ್ಮಿಸುವ ಮತ್ತು ಭದ್ರತಾ ಸಿಬ್ಬಂದಿ ನೇಮಕ ಮಾಡುವಂತೆ ದ.ಕ ಜಿಲ್ಲಾ ಕೆ.ಡಿ.ಪಿ ಸದಸ್ಯ ಸಂತೋಷ್ ಕುಮಾರ್ ರವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ದ.ಕ ಜಿಲ್ಲಾ ಕೆ.ಡಿ.ಪಿ ಸದಸ್ಯ ಸಂತೋಷ್ ಕುಮಾರ್ ರವರು ಆವಾಸೀಯ ಶಾಲೆಗೆ ಬೇಟಿ ಕೊಟ್ಟು ಪರಿಶೀಲಿಸಿದಾಗ, ಶಾಲೆಯ ಬಹುತೇಕ ಕೊಠಡಿಗಳಲ್ಲಿ ನೀರು ಸೋರುತ್ತಿರುವುದು ಕಂಡುಬಂದಿರುತ್ತದೆ. ಶಾಲೆಯಲ್ಲಿ 26 ಮಂದಿ ಬಾಲಕಿಯರು ಹಾಗೂ 74 ಮಂದಿ ಬಾಲಕರು ಒಟ್ಟಾಗಿ 100ವಿದ್ಯಾರ್ಥಿಗಳು 6 ನೇ ತರಗತಿಯಿಂದ 8 ತರಗತಿಯವರೆಗೆ ವಿದ್ಯಾರ್ಜನೆಯನ್ನು ಮಾಡುತ್ತಿದ್ದಾರೆ.
ಶಾಲೆಯನ್ನು ಪರಿಶೀಲಿಸುವ ಸಂಧರ್ಭದಲ್ಲಿ ಶಾಲೆಗೆ ಯಾವುದೇ ಆವರಣಗೋಡೆ ಹಾಗೂ ಭದ್ರತಾ ಸಿಬ್ಬಂದಿ ಕಂಡುಬಂದಿರುವುದಿಲ್ಲ. ಆದ್ದರಿಂದ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಭದ್ರತಾ ಹಿತ ದೃಷ್ಟಿಯಿಂದ ಕೂಡಲೇ ಶಾಲೆಗೆ ಆವರಣಗೋಡೆ ನಿರ್ಮಾಣ, ಭದ್ರತಾ ಸಿಬ್ಬಂದಿ ನೇಮಕ ಹಾಗೂ ಸೋರುತ್ತಿರುವ ಶಾಲಾ ಕಟ್ಟಡವನ್ನು ಸರಿಪಡಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಪತ್ರದ ಮೂಲಕ ವಿನಂತಿಸಿದ್ದಾರೆ.