22.2 C
ಪುತ್ತೂರು, ಬೆಳ್ತಂಗಡಿ
November 24, 2024
Uncategorized

ಮುಂಡಾಜೆ ಗ್ರಾ.ಪಂ. ನ ಮೊದಲ ಹಂತದ ಗ್ರಾಮಸಭೆ

ಮುಂಡಾಜೆ:ಮುಂಡಾಜೆ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ‌ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಗ್ರಾಮ‌ ಪಂಚಾಯತ್ ಸಭಾಭವನದಲ್ಲಿ ಆ. 22 ನಡೆಯಿತು.

ಮುಂಡಾಜೆ ಆರೋಗ್ಯ ಇಲಾಖೆಗೆ ಖಾಯಂ ವೈದ್ಯಾಧಿಕಾರಿಯ ನೇಮಕವಾಗಬೇಕು. ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಕೆಲವೊಂದು ದಾಖಲೆಗೆ ಸಹಿ ಮಾಡಲು ಕೂಡ ಖಾಯಂ ವೈದ್ಯಾಧಿಕಾರಿ ಇರದಿರುವುದರಿಂದ ಸಮಸ್ಯೆ ಎದುರಾಗಿದೆ. ವೈದ್ಯಾಧಿಕಾರಿಯ ಮೊಬೈಲ್ ನಂಬರನ್ನು ಆಸ್ಪತ್ರೆಯ ಸಿಬ್ಬಂದಿಗಳು ಕೊಡುವುದಿಲ್ಲ ಯಾಕೆ? ವೈದ್ಯಾಧಿಕಾರಿ ಮೊಬೈಲ್ ನಂಬರನ್ನು ಬೋರ್ಡ್ ಮೇಲೆ ಹಾಕಬೇಕೆಂದು ನಾಮದೇವ್ ರಾವ್ ಆಗ್ರಹಿಸಿದರು.ಮಾರ್ಗದರ್ಶಿ ಅಧಿಕಾರಿಯಾಗಿ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿಯಾದ ಪ್ರತಿಮಾ ಅವರು ಗ್ರಾಮ ಸಭೆಯನ್ನು ಉತ್ತಮವಾಗಿ ನಡೆಸಿಕೊಟ್ಟರು. ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ ಎಲ್ಲರನ್ನು ಸ್ವಾಗತಿಸಿ,ಅನುಪಾಲನಾ ವರದಿ ಮತ್ತು ಜಮಾಖರ್ಚಿನ ವಿವಿರವನ್ನು ಸಭೆಯ ಮುಂದಿಟ್ಟರು.ಪಂಚಾಯತ್ ಉಪಾದ್ಯಕ್ಷೆ ಸುಮಲತಾ, ಸದಸ್ಯರಾದ ಜಗದೀಶ,ರಿಶಾ ಪಟವರ್ಧನ್,ರವಿಚ್ಚಂದ್ರ,ಅಶ್ವಿನಿ,ಎ.ರಾಮಣ್ಣ ಶೆಟ್ಟಿ, ವಿಮಲ ಎಚ್.ಎಸ್,ರಂಜಿನಿ,ವಿಶ್ವನಾಥ ಶೆಟ್ಟಿ, ಯಶೋಧ ಉಪಸ್ಥಿತರಿದ್ದರು.ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು. ಆಶಾ,ಅಂಗನವಾಡಿ ಕಾರ್ಯಕರ್ತೆಯರು,ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Related posts

ಮೇಲಂತಬೆಟ್ಟುವಿನ ಮನೆಯಂಗಳದಲ್ಲಿ ಭಾರಿಗಾತ್ರದ ಕಾಳಿಂಗ ಸರ್ಪ: ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ

Suddi Udaya

ಲಾಯಿಲ:ಉಮ್ಮಣ್ಣ ಗೌಡ ನಿಧನ

Suddi Udaya

ಬಳಂಜ‌ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಯುವ ಸಾಧಕಿ ಮಾನ್ಯರವರಿಗೆ ಸನ್ಮಾನ

Suddi Udaya

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದಿಂದ ಡಿ.2 ಯಕ್ಷ ಸಂಭ್ರಮ 2023

Suddi Udaya

ಮಿತ್ತಬಾಗಿಲು ಚೌಕಿಬೆಟ್ಟು ನಿವಾಸಿ ತನಿಯಪ್ಪ ಪೂಜಾರಿ ನಿಧನ

Suddi Udaya
error: Content is protected !!