ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಆಳ್ವಾಸ್ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಕರ್ನಾಟಕ ರಾಜ್ಯ ವೇಸ್ಟ್ ಲಿಪ್ಟರ್ಸ್ ಸಂಸ್ಥೆ(ರಿ.) ಬೆಂಗಳೂರು, ಜಿಲ್ಲಾ ವೇಯ್ಟ್ ಲಿಪ್ಟರ್ಸ್ ಸಂಸ್ಥೆ(ರಿ.) ಮೈಸೂರು, ಫಿಸಿಕಲ್ ಎಜುಕೇಷನ್ ಟೀಚರ್ಸ್ ಅಕಾಡಮಿ ಟ್ರಸ್ಟ್ (ರಿ.) ಮೈಸೂರು ಮತ್ತು ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ದೈಹಿಕ ಶಿಕ್ಷಣ ವಿಭಾಗ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದ 5ನೇ ಜೂನಿಯರ್, ಸಬ್ ಜೂನಿಯರ್ (ಬಾಲಕ ಮತ್ತು ಬಾಲಕಿಯರು) 51ನೇ ಪುರುಷರ 35ನೇ ಮಹಿಳೆಯರ ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ 2024-25ನೇ ಸಾಲಿನಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡವು 18 ಚಿನ್ನ, 19 ಬೆಳ್ಳಿ, 16 ಕಂಚು ಹಾಗೂ ಒಟ್ಟು 53 ಪದಕಗಳೊಂದಿಗೆ ಆರು ವಿಭಾಗದಲ್ಲೂ ತಂಡ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪುರುಷರ ವಿಭಾಗದಲ್ಲಿ : ಸಬ್ ಜೂನಿಯರ್‌ನಲ್ಲಿ : 2 ಚಿನ್ನ, 1 ಬೆಳ್ಳಿ, 3 ಕಂಚು, ಜೂನಿಯರ್ ವಿಭಾಗದಲ್ಲಿ : 3 ಚಿನ್ನ, 4 ಬೆಳ್ಳಿ, 2 ಕಂಚು, ಸೀನಿಯರ್ ವಿಭಾಗದಲ್ಲಿ : 4 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕ ಪಡೆದುಕೊಂಡಿದೆ. ಮಹಿಳೆಯರ ವಿಭಾಗದಲ್ಲಿ : ಸಬ್ ಜೂನಿಯರ್‌ನಲ್ಲಿ : 2 ಚಿನ್ನ, 5 ಬೆಳ್ಳಿ, 2 ಕಂಚು, ಜೂನಿಯರ್ ವಿಭಾಗದಲ್ಲಿ : 3 ಚಿನ್ನ, 4 ಬೆಳ್ಳಿ, 2 ಕಂಚು, ಸೀನಿಯರ್ ವಿಭಾಗದಲ್ಲಿ : 4 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕ ಪಡೆದುಕೊಂಡಿದೆ. ಪುರುಷರ ಸಬ್ ಜೂನಿಯರ್ ವಿಭಾಗದಲ್ಲಿ : ಆಳ್ವಾಸ್ ಕಾಲೇಜು 149 ಅಂಕದೊಂದಿಗೆ ಪ್ರಥಮ, ಜೈನ್ ಜೂನಿಯರ್ ಕಾಲೇಜು, ಮೂಡುಬಿದರೆ 122 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು.

ಪುರುಷರ ಜೂನಿಯ‌ರ್ ವಿಭಾಗದಲ್ಲಿ : ಆಳ್ವಾಸ್ ಕಾಲೇಜು 174 ಅಂಕದೊಂದಿಗೆ ಪ್ರಥಮ, ಎಸ್‌ಡಿಎಂ ಕಾಲೇಜು ಉಜಿರೆ 148 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು. ಪುರುಷರ ಸೀನಿಯರ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು 260 ಅಂಕದೊಂದಿಗೆ ಪ್ರಥಮ, ಎಸ್‌ಡಿಎಂ ಕಾಲೇಜು ಉಜಿರೆ 205 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು.

ಮಹಿಳೆಯರ ಸಬ್ ಜೂನಿಯರ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಒಟ್ಟು 247 ಅಂಕದೊಂದಿಗೆ ಪ್ರಥಮ, ಡಿವೈಐಎಸ್ ಬೆಳಗಾವಿ 184 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು. ಮಹಿಳೆಯರ ಜೂನಿಯರ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು 246 ಅಂಕದೊಂದಿಗೆ ಪ್ರಥಮ, ಎಸ್‌ಡಿಎಂ ಕಾಲೇಜು ಉಜಿರೆ 161 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು. ಮಹಿಳಾ ಸೀನಿಯರ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು 232 ಅಂಕದೊಂದಿಗೆ ಪ್ರಥಮ, ಎಸ್‌ಡಿಎಂ ಕಾಲೇಜು ಉಜಿರೆ 130 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು. ಅಳ್ವಾಗ್ ಕಾಲೇಜು ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿರುತ್ತಾರೆ.

Leave a Comment

error: Content is protected !!