27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಿಡಿಗಲ್ ನೇತ್ರಾವತಿ ನದಿಯಲ್ಲಿ ಸಿಕ್ಕಿಹಾಕಿಕೊಂಡ ದನಗಳ ರಕ್ಷಣೆ

ಕಲ್ಮಂಜ : ನಿಡಿಗಲ್ ನೇತ್ರಾವತಿ ನದಿಯಲ್ಲಿ ಏಕಾಏಕಿ ನೀರು ಏರಿಕೆ ಉಂಟಾದಾಗ ನದಿ ಮಧ್ಯದ ದಿಬ್ಬದಲ್ಲಿ ಸಿಲುಕಿದ್ದ ದನಗಳನ್ನು ರಕ್ಷಿಸಿದ ಘಟನೆ ಆ.21ರ ಸಂಜೆ ನಡೆದಿದೆ.

ನಿಡಿಗಲ್‌ನಲ್ಲಿ ಹರಿಯುವ ನೇತ್ರಾವತಿ ನದಿಯ ಮಧ್ಯದ ದಿಬ್ಬದಲ್ಲಿ ಮೂರು ದನಗಳು ಮೇಯುತ್ತಿದ್ದವು. ಈ ವೇಳೆ ನದಿಯಲ್ಲಿ ನೀರು ಏಕಾಏಕಿ ಏರಿಕೆಯಾಗಿದೆ. ನದಿಯ ಮಧ್ಯ ಭಾಗದಲ್ಲಿ ಸಿಲುಕಿದ್ದ ದನಗಳನ್ನು ಕರ್ತವ್ಯ ಮುಗಿಸಿ ದಿಡುಪೆ ಕಡೆ ಸರ್ವಿಸ್ ವಾಹನದಲ್ಲಿ ತೆರಳುತ್ತಿದ್ದ ಗೃಹರಕ್ಷಕ ದಳ ಮತ್ತು ಪ್ರವಾಹ ರಕ್ಷಣಾ ಪಡೆಯ ಚಾಕೋ ಕೆ.ಜೆ.ಅವರು ನೋಡಿದ್ದು ತಕ್ಷಣ ವಾಹನ ನಿಲ್ಲಿಸಿ ಜೀಪು ಚಾಲಕರಾದ ಮಾಜಿ ತಾ.ಪಂ.ಸದಸ್ಯ ಜಯರಾಮ ದಿಡುಪೆ ಹಾಗೂ ಪ್ರಸನ್ನ ಶಿಕ್ಷಣ ಸಂಸ್ಥೆಗಳ ಚಾಲಕ ಅಬೂಬಕರ್ ಅವರ ಜತೆ ನದಿಗೆ ಇಳಿದು ಈಜಿಕೊಂಡು ಹೋಗಿ ಹಗ್ಗದ ಮೂಲಕ ದನಗಳನ್ನು ನದಿಯ ಇನ್ನೊಂದು ಬದಿಗೆ ತಂದು ರಕ್ಷಣೆ ಮಾಡಿದ್ದಾರೆ.

Related posts

ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢ ಕಲಶಾಭಿಷೇಕ

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿದ ಸ್ಟೀಲ್ ಪಾತ್ರೆ ಒಳಗೆ ವ್ಯಕ್ತಿಯ ಶವ ಪತ್ತೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಳೆ0ಜ :ಆನೆ ದಾಳಿ ಅಡಿಕೆ ಗಿಡ ಮತ್ತು ಬಾಳೆ ಗಿಡ ಸಂಪೂರ್ಣ ನಾಶ

Suddi Udaya

ಆರಂಬೋಡಿ ಬಂಟ್ಸ್ ಸಂಘದ ಗ್ರಾಮ ಸಮಿತಿ ಸಭೆ

Suddi Udaya

ಅಪರಿಚಿತ ವ್ಯಕ್ತಿ ಮೃತ್ಯು: ವಿಳಾಸ ಪತ್ತೆಗಾಗಿ ಬೆಳ್ತಂಗಡಿ ಪೊಲೀಸರ ಮನವಿ

Suddi Udaya
error: Content is protected !!