ಬೆಳ್ತಂಗಡಿ: 2021-22ನೇ ಸಾಲಿನ ಸುಮಾರು 14ಕ್ಕಿಂತಲೂ ಹೆಚ್ಚು ಕಾಮಗಾರಿಗ ಸ್ಥಳ ತನಿಖೆ ನಡೆಸಿ ದ್ದ ಲೋಕಾಯುಕ್ತ ವಿಭಾಗದ ಸಹಾಯಕ ಇಂಜಿನಿಯರ್ ಹಾಗೂ ಲೆಕ್ಕ ಪರಿಶೋಧಕರು ಕಾಮಗಾರಿ ಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖವನ್ನು ಮಾಡಿದ್ದಾರೆ.ಜೊತೆಗೆ ಕೆಲವೊಂದು ತಾಂತ್ರಿಕ ನ್ಯೂನತೆಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಇಂದುಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದ ಅಡೀಲು ತಿಳಿಸಿದ್ದಾರೆ.
2023 ಜೂ.21ರಂದು ಜಯರಾಮ್ ಕೆ ಬಿನ್ ಅಣ್ಣು ಗೌಡ ಸೋಮಯ್ಯ ದೊಡ್ದು ಮನೆ ಬಂಗಾಡಿ ಇಂದಬೆಟ್ಟು ಗ್ರಾಮ ಎಂಬವರು, ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ 2021-22ನೇ ಸಾಲಿನಲ್ಲಿ ಸುಮಾರು 14ಕ್ಕಿಂತಲೂ ಹೆಚ್ಚು ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಲೋಕಾಯುಕ್ತಕ್ಕೆ ದೂರನ್ನು ಸಲ್ಲಿಸಿರುತ್ತಾರೆ. ಅದರ ಪ್ರಕಾರ ಲೋಕಾಯುಕ್ತರು ಕಳೆದ ತಿಂಗಳು 9,10,11ರಂದು ಸ್ಥಳ ತನಿಖೆಯನ್ನು ಲೋಕಾಯುಕ್ತ ವಿಭಾಗದ ಸಹಾಯಕ ಇಂಜಿನಿಯರ್ ಹಾಗೂ ಲೆಕ್ಕ ಪರಿಶೋಧಕರು ಬಂದು ಎರಡು ದಿನಗಳ ಕಾಲ ಇಲ್ಲಿ ಯಾವುದೆಲ್ಲ ಕಾಮಗಾರಿಯನ್ನು ಅವ್ಯವಹಾರ ಎಂದು ಜಯರಾಮ್ ರವರು ದೂರು ನೀಡಿದ್ದರೋ ಆ ಎಲ್ಲಾ ಕಾಮಗಾರಿಯನ್ನು ಸ್ಥಳ ಪರಿಶೀಲನೆ ಮಾಡಿದ್ದಾರೆ. ಪರಿಶೀಲನೆ ನಡೆಸಿದಾಗ ಕೊಡ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖವನ್ನು ಲೋಕಾಯುಕ್ತರು ಮಾಡಿದ್ದಾರೆ.
ಜೊತೆಗೆ ಕೆಲವೊಂದು ತಾಂತ್ರಿಕ ನ್ಯೂನತೆಗಳನ್ನು ಕೂಡ ಅವರ ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದಾರೆ. ಮತ್ತು ಅದಕ್ಕೆ 2024 ಸೆ.19
ರ ಒಳಗೆ ತಮ್ಮ ಆಕ್ಷೇಪನೆಯನ್ನು ಕೂಡ ಸಲ್ಲಿಸುವುದಕ್ಕೆ ನಮಗೆ ಅವಕಾಶ ನೀಡಿದ್ದಾರೆ. ಆದರೆ ಇಂದು ಕೆಲವೊಂದು ಮಾಧ್ಯಮದಲ್ಲಿ, ವಾಟ್ಸಾಪ್ ಮೂಲಕ ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಭ್ರಷ್ಟಾಚಾರವನ್ನು ಲೋಕಾಯುಕ್ತರು ಸಾಭೀತು ಮಾಡಿದ್ದಾರೆ ಎನ್ನುವಂತಹ ವರದಿ ಬಂದಿದೆ. ಇಂದಬೆಟ್ಟು ಪಂಚಾಯತ್ ನಲ್ಲಿ ಒಂದು ರೂ ಭ್ರಷ್ಟಾಚಾರ ನಡೆದಿಲ್ಲ. ಹಾಗೂ ಯಾವುದೇ ಅವ್ಯವಹಾರ ನಡೆದಿಲ್ಲ. ಎಲ್ಲವನ್ನು ಲೋಕಾಯುಕ್ತರು ತನಿಖೆ ನಡೆಸಿದ್ದಾರೆ. ಜಯರಾಮ್ ಬಂಗಾಡಿಯವರ ಆರೋಪ ಸತ್ಯಕ್ಕೆ ದೂರವಾದ ವಿಚಾರ ರಾಜಕೀಯವಾಗಿ ನನ್ನನ್ನು ತೇಜೋವದೆ ಮಾಡುವಂತಹ ದೃಷ್ಟಿಯಿಂದ ಜಯರಾಮ್ ರವರು ಈ ಆರೋಪ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ
.