23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಲು ಆ.31 ಕೊನೆಯ ದಿನಾಂಕ

ಬೆಳ್ತಂಗಡಿ: ಪಡಿತರ ಚೀಟಿದಾರರು ಪ್ರತೀ ತಿಂಗಳು ಪಡಿತರ ಪಡೆಯುವುದಲ್ಲದೆ ಅನ್ನ ಭಾಗ್ಯ ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸರಕಾರವು ಕಳೆದ 5 ವರ್ಷಗಳಿಂದ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವಂತೆ ನಿರ್ದೇಶನ ನೀಡಿದ್ದರೂ ಕೆಲವೊಂದು ಪಡಿತರ ಚೀಟಿ ಸದಸ್ಯರು ಇನ್ನೂ ಇ-ಕೆವೈಸಿ ಮಾಡದೇ ಇರುವುದು ಕಂಡುಬರುತ್ತಿದೆ. ಪ್ರಸ್ತುತ ಸರಕಾರವು ಯಾವುದೇ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಲೂ ಕೂಡಾ ಅವಕಾಶ ಕಲ್ಪಿಸಿರುತ್ತದೆ. ಜೀವಮಾಪನ ನೀಡಿ ಇ-ಕೆವೈಸಿ ಮಾಡಿಸಲು ಬಾಕಿ ಇರುವ ಸದಸ್ಯರು ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡುವುದು. ಸರಕಾರವು ಆ.31 ರವರೆಗೆ ಅವಕಾಶ ಕಲ್ಪಿಸಿದ್ದು ತಪ್ಪದೆ ಇ-ಕೆವೈಸಿ ಮಾಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಗಳಿಗೆ ಕೆಲಸ ನಿಮಿತ್ತ ತೆರಳಿರುವ ವ್ಯಕ್ತಿಗಳು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಜೀವಮಾಪನ ನೀಡಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿ ಇ-ಕೆವೈಸಿಯನ್ನು ಮಾಡುವಂತೆ ತಿಳಿಸಿದೆ. ಇದು ಪಡಿತರ ಚೀಟಿದಾರರಿಗೆ ಕೊನೆಯದಾಗಿ ತಿಳುವಳಿಕೆ ನೀಡುವುದಾಗಿದ್ದು ಆ.31 ರ ನಂತರ ಇ-ಕೆವೈಸಿ ಬಾಕಿಯಾಗಿರುವ ಪಡಿತರ ಚೀಟಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ವಾಸ್ತವ್ಯಕ್ಕೆ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ ಇ-ಕೆವೈಸಿ ಮಾಡಿಸಿ ಕೊಳ್ಳಬೇಕು.

ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಇ-ಕೆವೈಸಿ ಮಾಡಿಸಿ ಕೊಳ್ಳಲು ಅವಕಾಶವಿದೆ. ಪಡಿತರಚೀಟಿದಾರರ ಎಲ್ಲಾ ಸದಸ್ಯರ ಬಯೋದೃಢೀಕರಣ ಮಾಡಿಸಬೇಕು. ವಿಶೇಷ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಆ ಬಗ್ಗೆ ದೃಢಪತ್ರ,ಆಧಾರ್ ಸಂಖ್ಯೆ, ಫೋನ್ ನಂಬರ್, ಅಡುಗೆ ಅನಿಲದ ಮಾಹಿತಿ ಹಾಗೂ ಕುಟುಂಬದ ಸದಸ್ಯರ ಸಂಬಂಧವನ್ನು ಸಹ ಇ-ಕೆವೈಸಿಯಲ್ಲಿ ನಮೂದಿಸಬೇಕು. ಇದು ಜಿಲ್ಲೆಯ ಹಾಗೂ ಪರ ಜಿಲ್ಲೆಯ ಪಡಿತರ ಚೀಟಿದಾರರಿಗೆ ಅಂತಿಮ ಅವಕಾಶವಾಗಿದ್ದು, ಇ-ಕೆವೈಸಿ ಮಾಡಿಸಿ ಕೊಳ್ಳದ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ರದ್ದಾಗಬಹುದು. ಪಡಿತರ ಚೀಟಿಗಳಲ್ಲಿ ಭಾಗಶ: ಜೀವಮಾನ ನೀಡಲ್ಪಟ್ಟು ಬಾಕಿ ಉಳಿದಿರುವ ಸದಸ್ಯರು ಕೂಡಾ ಈ ತಿಂಗಳ ಅಂತ್ಯದವರೆಗೆ ಕಾಯದೇ ಕೂಡಲೇ ಇ-ಕೆವೈಸಿ ಮಾಡಿಸಿ ಕೊಂಡು ಪಡಿತರ ಚೀಟಿಯನ್ನು ಊರ್ಜಿತವಾಗಿರಿಸಿಕೊಳ್ಳಬಹುದಾಗಿರುತ್ತದೆ

Related posts

ಅಂಡಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ “ಕ್ಷೀರ ಸಮೃದ್ಧಿ” ಲೋಕಾರ್ಪಣೆ

Suddi Udaya

ಧರ್ಮಸ್ಥಳ : ನೇರ್ತನೆಯಲ್ಲಿ ದನದ ಕರುವಿನ ಮೇಲೆ ಚಿರತೆ ದಾಳಿ

Suddi Udaya

ಸೆ.7-8: ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು ಸಮಿತಿಯ ವತಿಯಿಂದ 25 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ: ಹೈಕೋರ್ಟು ತೀರ್ಪು ಪ್ರಕಟ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆ

Suddi Udaya

ಚಿಬಿದ್ರೆ ನಿವಾಸಿ ಚಂದ್ರಕಲಾ ಹೃದಯಾಘಾತದಿಂದ ನಿಧನ

Suddi Udaya

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯ

Suddi Udaya
error: Content is protected !!