April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ನಾಳ: ದ್ವಿಚಕ್ರ ವಾಹನ ಅಪಘಾತ: ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ದ್ವಿಚಕ್ರ ವಾಹನ ಅಪಘಾತದಿಂದ ಮೂವರು ಗಾಯಗೊಂಡಿರುವ ಕುರಿತು ನಾಳ ಸಮೀಪದ ನ್ಯಾಯತರ್ಪು ನಿವಾಸಿ ಅನುಷ ಬಿ. (27ವ) ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.20 ರಂದು ರಾತ್ರಿ, ಅಶ್ವಥ್ ರವರು ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಸವಾರನಾಗಿ ಅಶ್ವಥ್ ರವರು ಹಾಗೂ ಸಹಸವಾರಳಾಗಿ ಅನುಷ ಹಾಗೂ ಅನುಷ ರವರ ಮಗ ರಿದ್ವಿನ್ ರವರನ್ನು ಕುಳ್ಳಿರಿಸಿಕೊಂಡು ಗೇರುಕಟ್ಟೆ ಕಡೆಯಿಂದ ಗೋವಿಂದೂರು ಕಡೆ ತೆರಳುತ್ತಾ ಕಳಿಯ ಗ್ರಾಮದ ತಾರಿದಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ, ಅಶ್ವಥ್ ರವರು ಸದ್ರಿ ದ್ವಿಚಕ್ರ ವಾಹನವನ್ನು ದುಡುಕುತನದಿಂದ ಸವಾರಿ ಮಾಡಿದ ಪರಿಣಾಮ, ಅನುಷ ಹಾಗೂ ರಿದ್ವಿನ್ ಹಾಗೂ ಅಶ್ವಥ್ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಗಾಯಾಳುಗಳು ಚಿಕತ್ಸೆಗಾಗಿ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 87/2024 ಕಲಂ: 281, 125(A), BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ನ.14: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರಿಂದ ಶ್ರೀ ಕ್ಷೇ.ಧ.ಗ್ರಾ.ಯೋ. ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

Suddi Udaya

ಕಾಲೇಜಿಗೆ ಹೋಗಿದ್ದ ಅರಸಿನಮಕ್ಕಿಯ ತೀರ್ಥೇಶ್ ನಾಪತ್ತೆ

Suddi Udaya

ಪಣಕಜೆ : ಚರಂಡಿಗೆ ವಾಲಿದ ಕೆಎಸ್ಆರ್ ಟಿಸಿ ಬಸ್ಸು

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ.ಯಲ್ಲಿ ವಿಶ್ವ ಮಹಿಳಾ ದಿನಾಚರಣೆ

Suddi Udaya

ಶಿಲ್ಪಕಲಾ ಅಕಾಡೆಮಿ ಕಲಾಕೃತಿ ಪ್ರಶಸ್ತಿಗೆ ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ಆಯ್ಕೆ

Suddi Udaya
error: Content is protected !!