25.7 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಗೇರುಕಟ್ಟೆ 52ನೇ ವಷ೯ದ ಶ್ರೀ ಗಣೇಶೋತ್ಸವ ಪ್ರಯುಕ್ತ ಕೆಸರ್ಡೊಂಜಿದಿನ

ಬೆಳ್ತಂಗಡಿ : ಗೇರುಕಟ್ಟೆ 52 ನೇ ವರ್ಷದ ಶ್ರೀ ಗಣೇಶೋತ್ಸವ ಪ್ರಯುಕ್ತ ಸಾರ್ವಜನಿಕರಿಗೆ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆ.25 ರಂದು ಬದಿನಡೆ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿ ನಡೆಯಿತು. ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.

ತೆಂಗಿನಕಾಯಿ ಹೊಡೆಯುವ ಮೂಲಕ ಗದ್ದೆಯ ಮಾಲೀಕ ರೇಜಿನಾಲ್ಡ್ ಕ್ರೀಡೆಗೆ ಚಾಲನೆ ನೀಡಿದರು. ಕನ್ನಡ ಉಪನ್ಯಾಸಕರಾದ ಕೇಶವ ಬಂಗೇರ ಸಂದರ್ಭೋಚಿತವಾಗಿ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ಪುರುಷೋತ್ತಮ , ಉಪಾಧ್ಯಕ್ಷರಾದ ಶರತ್ ಶೆಟ್ಟಿ ಕೆ,ಉಮೇಶ್ ಶೆಟ್ಟಿ ಎಸ್, ಪ್ರಧಾನ ಕಾರ್ಯದರ್ಶಿ ರಂಜನ್ ಹೆಚ್,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ತುಕಾರಾಂ ಪೂಜಾರಿ, ಕಾರ್ಯದರ್ಶಿಗಳಾದ ಪುರಂದರ ಜಿ,ರಾಜೇಶ್

ಪೆಂರ್ಬುಡ,ಯುವರಾಜ ಎಮ್,ರವೀಂದ್ರ ಸಾಲ್ಯಾನ್, ಶ್ರೇಯಶ್ ಹೆಚ್,ಕೋಶಾಧಿಕಾರಿ ಯೋಗೀಶ್ ಸುವರ್ಣ ಎ, ಲೆಕ್ಕ ಪರಿಶೋಧಕ ಶೇಖರ ನಾಯ್ಕ, ಸಂಚಾಲಕರಾದ ಕರಣಾಕರ ಶೆಟ್ಟಿ ಕೆ,ನವೀನ್ ಗೌಡ ಡಿ.ಗಣೇಶ್ ಕೆ, ದೈಹಿಕ ಶಿಕ್ಷಣ ಶಿಕ್ಷಕ ಸುಂದರ ನಾಯ್ಕ ಹಾಗೂ ಸಮಿತಿ ಸದಸ್ಯರು ಹಾಗೂ ಕ್ರೀಡಾ ಪಟ್ಟುಗಳು,ಅಭಿಮಾನಿಗಳು ಬಾಗಹಿಸಿದರು. ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆ ನಡೆಯಿತು. ಗದ್ದೆಯ ಮಾಲೀಕರಾದ ರೆಜಿನಾಲ್ಡ್ ಮತ್ತು ಪೆಡ್ಡಿ ಸಹೋದರರು ಕ್ರೀಡೆಗೆ ಸಹಕರಿಸಿದರು.ಡಾಕಯ್ಯ ಗೌಡ ಹೆಚ್. ಸ್ವಾಗತಿಸಿ, ವಂದಿಸಿದರು.

Related posts

ವಿಪರೀತ ಮಳೆಯಿಂದಾಗಿ ಕುಂಟಿನಿ ಹಮ್ಮಬ್ಬ ರವರ ಹೊಟೇಲ್ ನ ಮೇಲ್ಛಾವಣಿ ಕುಸಿತ : ಸೂಕ್ತ ಪರಿಹಾರಕ್ಕಾಗಿ ಎಸ್.ಡಿ.ಪಿಐ ಒತ್ತಾಯ

Suddi Udaya

ನೆರಿಯ ಕಾರಿನ ಮೇಲೆ ಒಂಟಿ ಸಲಗ ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಎಸಿಎಫ್ ಶ್ರೀಧರ್ ಭೇಟಿ ನೀಡಿ ಪರಿಶೀಲನೆ

Suddi Udaya

ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ ಕ್ಯಾಲೆಂಡರ್ ಬಿಡುಗಡೆ.

Suddi Udaya

ನಾರಾವಿ ವಲಯ ಹೆಗ್ಗಡೆ ಸಂಘದ ನೂತನ ಅಧ್ಯಕ್ಷ ಕಾರ್ಯದರ್ಶಿ ಆಯ್ಕೆ

Suddi Udaya

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿರುವ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿಗೆ ಜನಪದ ಕ್ಷೇತ್ರದಲ್ಲಿ ಉದಯಕುಮಾರ ಲಾಯಿಲ ಆಯ್ಕೆ

Suddi Udaya

ಕಾರಿಂಜ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿದೇವರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ಭವ್ಯ ಮೆರವಣಿಗೆಯೊಂದಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya
error: Content is protected !!