30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿ

ಕೊಕ್ಕಡ ಉಪ್ಪಾರಹಳ್ಳದಲ್ಲಿ ದಿಢೀರನೆ ಎದ್ದ ಭೀಕರ ಸುಂಟರ ಗಾಳಿ: ಗಾಳಿಗೆ ಹಾರಿ ಹೋಯಿತು ಹಲವು ಮನೆಗಳ ಹಂಚು, ಶೀಟ್ -ತೋಟಗಳಲ್ಲಿ ಮುರಿದು ಬಿತ್ತು ಅಡಿಕೆ, ತೆಂಗಿನ ಮರಗಳು

ಕೊಕ್ಕಡ : ಕೊಕ್ಕಡ ಪರಿಸರದ ಉಪ್ಪಾರಹಳ್ಳದಲ್ಲಿ ಇಂದು ಎದ್ದ ಸುಳಿಗಾಳಿಗೆ ಹಲವಾರು ಅಡಿಕೆ ಮರಗಳು, ಮನೆಗಳ ಶೀಟು, ಹಂಚುಗಳು ಹಾರಿ ಹೋಗಿ ಬಹಳಷ್ಟು ಹಾನಿಯಾಗಿದೆ.

ಗೋಳಿತೊಟ್ಟು ಬಳಿಯ ಕೋಡಿಂಗೇರಿ ಪ್ರದೇಶದ ಉಪ್ಪಾರಹಳ್ಳದಲ್ಲಿ ಎದ್ದ ಸುಳಿಗಾಳಿಗೆ ಒಬ್ಬರ 120 ಅಡಿಕೆ ಮರಗಳು ಉರುಳಿ ಬಿದ್ದಿದೆ. ಕೊಕ್ಕಡ ಪ್ರದೇಶದಲ್ಲಿ ಅನೇಕರ

ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಕೋಡಿಂಗೇರಿ ರತ್ನಾವತಿ ಕೃಷ್ಣಪ್ಪ ಗೌಡ ಅವರ ಮನೆಯ ಹಂಚು ಹಾಗೂ ಶೀಟ್ ಸಂಪೂರ್ಣ ಹಾರಿಹೋಗಿ ಹಾನಿಯಾಗಿದೆ. ಪಿಜಿನಡ್ಕ ಕಾಲೋನಿಯ ಒಂದಿಬ್ಬರ ಮನೆಯ ಶೀಟುಗಳು ಹಾರಿ ಹೋಗಿದೆ. ನಂತರ ಡೆಂಜ, ಅಗರ್ತ ಬೀಸುವ ಸಂಧರ್ಭ ಅದರ ವೇಗ ಕಡಿಮೆಯಾಗಿದೆ. ಸುಳಿಗಾಳಿಯ

ಭೀಕರತೆಯನ್ನು ಕಣ್ಣಾರೆ ಕಂಡ ಶಿವಪ್ಪ ಗೌಡರು ಹೇಳುವ ಪ್ರಕಾರ ಅವರು ಗುಡ್ಡದಲ್ಲಿರುವ ತನ್ನ ತೋಟದ ತೆಂಗಿನ ಮರಗಳಿಗೆ ಗೊಬ್ಬರ ಹಾಕುತ್ತಿದ್ದು, ಆ ಸಂಧರ್ಭ ವಿಪರೀತ

ಶಬ್ದ ಕೇಳಿದೆ. ಶಬ್ದ ಬರುವ ಕಡೆ ನೋಡಿದಾಗ ಗಿಡಗಳು ತುಂಡಾಗುವ ಶಬ್ದ ಕೇಳಿ ಬರುತ್ತಿದ್ದು ಇದು ವಿಮಾನವೇ ಬಿದ್ದಿದೆ ಎಂದು ಕೆಳಗಡೆ ಓಡಿ ಬಂದಿದ್ದಾರೆ. ಅಡಿಕೆ ಸೋಗೆಗಳು ಬಹಳಷ್ಟು ಎತ್ತರದಲ್ಲಿ ಹಾರಾಡುವುದು ಕಾಣುತ್ತಿತ್ತಂತೆ. ಘಟನಾ ಸ್ಥಳಕ್ಕೆ ಕಂದಾಯ, ಪಂಚಾಯತ್ ಅಧಿಕಾರಿಗಳು, ಗ್ರಾ. ಪಂ. ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ, ಸದಸ್ಯ ಜಗದೀಶ್ ಕೆಂಪಕೋಡಿ ಭೇಟಿ ನೀಡಿದ್ದಾರೆ.

Related posts

ಅಳದಂಗಡಿಯಲ್ಲಿ ಸೌಮ್ಯ ರೆಸಿಡೆನ್ಸಿ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಲೋಕಾರ್ಪಣೆ

Suddi Udaya

ಮುಂಡಾಜೆ: ತುಂಡಾಗಿ ಬಿದ್ದ ಎಚ್‌ ಟಿ ವಿದ್ಯುತ್ ತಂತಿ: ತಪ್ಪಿದ ಭಾರಿ ಅನಾಹುತ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಆಗಿ ಮತ್ತೆ ಪೃಥ್ವಿ ಸಾನಿಕಂ ನೇಮಕ

Suddi Udaya

ಸೆ.1-3: ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ 352ನೇ ಆರಾಧನಾ ಮಹೋತ್ಸವ

Suddi Udaya

ನೆರಿಯ, ಕೊಕ್ಕಡದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ನಾಯಕರು

Suddi Udaya

ಡಿ.10 -11: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ

Suddi Udaya
error: Content is protected !!