ಬೆಳ್ತಂಗಡಿ : ಗೇರುಕಟ್ಟೆ 52 ನೇ ವರ್ಷದ ಶ್ರೀ ಗಣೇಶೋತ್ಸವ ಪ್ರಯುಕ್ತ ಸಾರ್ವಜನಿಕರಿಗೆ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆ.25 ರಂದು ಬದಿನಡೆ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿ ನಡೆಯಿತು. ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ತೆಂಗಿನಕಾಯಿ ಹೊಡೆಯುವ ಮೂಲಕ ಗದ್ದೆಯ ಮಾಲೀಕ ರೇಜಿನಾಲ್ಡ್ ಕ್ರೀಡೆಗೆ ಚಾಲನೆ ನೀಡಿದರು. ಕನ್ನಡ ಉಪನ್ಯಾಸಕರಾದ ಕೇಶವ ಬಂಗೇರ ಸಂದರ್ಭೋಚಿತವಾಗಿ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ಪುರುಷೋತ್ತಮ , ಉಪಾಧ್ಯಕ್ಷರಾದ ಶರತ್ ಶೆಟ್ಟಿ ಕೆ,ಉಮೇಶ್ ಶೆಟ್ಟಿ ಎಸ್, ಪ್ರಧಾನ ಕಾರ್ಯದರ್ಶಿ ರಂಜನ್ ಹೆಚ್,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ತುಕಾರಾಂ ಪೂಜಾರಿ, ಕಾರ್ಯದರ್ಶಿಗಳಾದ ಪುರಂದರ ಜಿ,ರಾಜೇಶ್
ಪೆಂರ್ಬುಡ,ಯುವರಾಜ ಎಮ್,ರವೀಂದ್ರ ಸಾಲ್ಯಾನ್, ಶ್ರೇಯಶ್ ಹೆಚ್,ಕೋಶಾಧಿಕಾರಿ ಯೋಗೀಶ್ ಸುವರ್ಣ ಎ, ಲೆಕ್ಕ ಪರಿಶೋಧಕ ಶೇಖರ ನಾಯ್ಕ, ಸಂಚಾಲಕರಾದ ಕರಣಾಕರ ಶೆಟ್ಟಿ ಕೆ,ನವೀನ್ ಗೌಡ ಡಿ.ಗಣೇಶ್ ಕೆ, ದೈಹಿಕ ಶಿಕ್ಷಣ ಶಿಕ್ಷಕ ಸುಂದರ ನಾಯ್ಕ ಹಾಗೂ ಸಮಿತಿ ಸದಸ್ಯರು ಹಾಗೂ ಕ್ರೀಡಾ ಪಟ್ಟುಗಳು,ಅಭಿಮಾನಿಗಳು ಬಾಗಹಿಸಿದರು. ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆ ನಡೆಯಿತು. ಗದ್ದೆಯ ಮಾಲೀಕರಾದ ರೆಜಿನಾಲ್ಡ್ ಮತ್ತು ಪೆಡ್ಡಿ ಸಹೋದರರು ಕ್ರೀಡೆಗೆ ಸಹಕರಿಸಿದರು.ಡಾಕಯ್ಯ ಗೌಡ ಹೆಚ್. ಸ್ವಾಗತಿಸಿ, ವಂದಿಸಿದರು.