24.3 C
ಪುತ್ತೂರು, ಬೆಳ್ತಂಗಡಿ
May 20, 2025
ಸಂಘ-ಸಂಸ್ಥೆಗಳು

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ.), ಬೆಳ್ತಂಗಡಿ ದ.ಕ. ಇದರ ಮಹಾಸಭೆ

ಬೆಳ್ತಂಗಡಿ :ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ.), ಬೆಳ್ತಂಗಡಿ ದ.ಕ. ಇದರ 2024 -25 ಸಾಲಿನ ಮಹಾಸಭೆಯು ಅಧ್ಯಕ್ಷರಾದ ಡಾ. ಕೆ. ಜಯಕೀರ್ತಿ ಜೈನ್ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡ, ಬೆಳ್ತಂಗಡಿಯಲ್ಲಿ ಆ. 26 ರಂದು ನಡೆಯಿತು ಅಧ್ಯಕ್ಷತೆ ವಹಿಸಿದ ಶ್ರೀ ಡಾ. ಕೆ. ಜಯಕೀರ್ತಿ ಜೈನ್ ಕಳೆದ 15 ವರ್ಷಗಳಲ್ಲಿ ಸಹಕಾರಿ ಸಂಘವು ಬೆಳೆದು ಬಂದ ದಾರಿಯನ್ನು ಸಭೆಗೆ ತಿಳಿಸಿದರು. ಮತ್ತು ಸದಸ್ಯರಿಗೆ
20% ಡಿವಿಡೆಂಟ್ ಘೋಷಿಸಿದರು
ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿದ್ದು 2023-24ನೇ ಸಾಲಿನ ವಾರ್ಷಿಕ ವರದಿ/ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಯಿತು.

ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ವಿಶೇಷ ಪ್ರೋತ್ಸಾಹಕ ನಿಧಿಯೊಂದಿಗೆ ಅಭಿನಂದಿಸಲಾಯಿತು. ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿಸಿದ ಸಾಲಗಾರರನ್ನು ಗುರುತಿಸಿ ಅಭಿನಂದಿಸಲಾಯಿತು.
ಉಪಾಧ್ಯಕ್ಷರಾದ ಶ್ರೀ ಚಿದಾನಂದ ಹೂಗಾರ್ ಸ್ವಾಗತಿಸಿ ನಿರ್ದೇಶಕರಾದ ಶ್ರೀ ಕೆ ಚಂದ್ರಶೇಖರ ರವರು ಧನ್ಯವಾದವಿತ್ತರು. ಸಲಹೆಗಾರರಾದ ಶ್ರೀ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನ ಕಾರ್ಯಕ್ರಮವನ್ನು ಶ್ರೀ ಧರಣೇಂದ್ರ ಕೆ ಜೈನ್ ನಿರ್ವಹಿಸಿದರು.

ನಿರ್ದೇಶಕರಾದ ಶ್ರೀ ಕೆ. ಚಂದ್ರಶೇಖರ, ಅಬ್ದುಲ್ ರಝಾಕ್, ಆರತಿ ಜೈನ್, ಪ್ರಶಾಂತ್ ಕುಮಾರ್, ಹೇಮಲತಾ, ವಾರಿಜ ಕೆ. ಜಯರಾಜ್ ಜೈನ್, ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವತ್ಸಲಾ ಜ್ಯೋತಿರಾಜ್, ಕೊಕ್ಕಡ ಶಾಖಾಧಿಕಾರಿ ಶ್ರೀ ಪಿ ಅತಿಶಯ್ ಚೈನ್, ಸಿಬ್ಬಂದಿ ವಿಶಾಲ ಹಾಗೂ ಎಲ್ಲಾ ಪಿಗ್ಗಿ ಸಂಗ್ರಾಹಕರು ಉಪಸ್ಥಿತರಿದ್ದರು

.

Related posts

ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ, ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ವಾರ್ಷಿಕ ಸಭೆ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ “ಬ್ರಹ್ಮಶ್ರೀ- 2025” ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೇರಿಮಾರು ಪ್ರ. ಕಾರ್ಯದರ್ಶಿಯಾಗಿ ಕೆ. ಬಾಲಕೃಷ್ಣ ಗೌಡ ಕಲ್ಲಾಜೆ ಆಯ್ಕೆ

Suddi Udaya

ಕಲ್ಲೇರಿ ಐಸಿರಿ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ ಮತ್ತು ಶ್ರಮದಾನ

Suddi Udaya

ಹೊಸಂಗಡಿ: ವಲಯ ಮಟ್ಟದ ಪದಗ್ರಹಣ ಸಮಾರಂಭ

Suddi Udaya
error: Content is protected !!