April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತೆಂಕಕಾರಂದೂರು ಸಂತಾನ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮ

ಬೆಳ್ತಂಗಡಿ: ಸಂತಾನ ಗೋಪಾಲ ಕೃಷ್ಣ ದೇವಸ್ಥಾನ ತೆಂಕಕಾರಂದೂರು ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆ ಗಳ ಉದ್ಘಾಟನೆ ಜರಗಿತು.

ಡಾ. ಎನ್ ಎಂ. ತುಳುಪುಳೆ ಶ್ರೀ ಕ್ಲಿನಿಕ್ ಅಳದಂಗಡಿ ಇವರು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಕೃಷಿಕರು, ಸಾಂಸ್ಕೃತಿಕ ಸಂಪನ್ನರಾದ ನಾರಾಯಣ ರೈ ಕಾರಂದೂರು, ಹಾಗೂ ದೇವಸ್ಥಾನದ ಗೌರವಾಧ್ಯಕ್ಷರಾದ, ಮುಜರಾಯಿ ಇಲಾಖೆಯ ಧಾರ್ಮಿಕ ಧತ್ತಿ ಪರಿಷತ್ತಿಗೆ ಆಯ್ಕೆಯಾದ ಕೆ.ಎಸ್.ಯೋಗೇಶ್ ಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಕೆ ವಸಂತ ಸಾಲ್ಯಾನ್, ದೇವಸ್ಥಾನದ ಆಡಳಿತ ಮೊಕ್ತೇಸರಾದ ಸುಬ್ರಹ್ಮಣ್ಯ ನೂರಿತ್ತಾಯ, ದೇವಸ್ಥಾನ ಸಮಿತಿ ಯ ಅಧ್ಯಕ್ಷರಾದ ಪದ್ಮ ನಾಯ್ಕ ಉಪಸ್ಥಿತರಿದ್ದರು.

ಜಾರು ಕಂಬ ಸ್ಪರ್ಧೆ,ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ ಭಕ್ತಿ ಗೀತೆ ಸ್ಪರ್ಧೆ ಲಕ್ಕಿ ಗೇಮ್, ಗುಂಡೆಸೆತ, ಮಡಿಕೆ ಹೊಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ, ವಾಲಿಬಾಲ್, ಕಬಡ್ಡಿ ಹಾಗೂ ವಿವಿಧ ಸ್ಪರ್ಧೆ ಗಳು ನಡೆಯಲಿವೆ,

Related posts

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

INICET ಪರೀಕ್ಷೆ : ಕೊಯ್ಯೂರಿನ ಡಾ. ರಿತೇಶ್ ಕುಮಾರ್ ರಿಗೆ 679ನೇ ರ್‍ಯಾಂಕ್

Suddi Udaya

ನಡ : ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಮದ್ದಡ್ಕದಲ್ಲಿ ಗಾಂಜಾ ಮಾರಾಟ: ಆರೋಪಿ ಬಂಧನ: 90 ಗ್ರಾಂ ಗಾಂಜಾ ವಶ

Suddi Udaya

ಧರ್ಮಸ್ಥಳ: ಆಟೋ ಚಾಲಕ ಸುಂದರ ಗೌಡ ನಿಧನ

Suddi Udaya

ವಿದ್ವತ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಮಹಿತಾ ಕುಮಾರಿ ಎಂ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ

Suddi Udaya
error: Content is protected !!