32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಂಡಾಜೆ: ತುಂಡಾಗಿ ಬಿದ್ದ ಎಚ್‌ ಟಿ ವಿದ್ಯುತ್ ತಂತಿ: ತಪ್ಪಿದ ಭಾರಿ ಅನಾಹುತ

ಬೆಳ್ತಂಗಡಿ:ಮುಂಡಾಜೆ ಗ್ರಾಮದ ಕಡಂಬಳ್ಳಿ ಎಂಬಲ್ಲಿ ಎಚ್ ಟಿ ಲೈನ್ ವಿದ್ಯುತ್ ತಂತಿ ಕಡಿದು ಬಿದ್ದು ಮೆಸ್ಕಾಂನ ಸಕಾಲಿಕ ಸ್ಪಂದನೆಯಿಂದ ಸಂಭವನೀಯ ಅನಾಹುತ ತಪ್ಪಿದೆ.


ಕಡಂಬಳ್ಳಿಯ ತಂಬೂರಿ ಪದ್ಮನಾಭ ಪಟವರ್ಧನ್ ಎಂಬವರ ರಬ್ಬರ್ ತೋಟದಲ್ಲಿ ಹಾದು ಹೋಗಿರುವ ಎಚ್ ಟಿ ಲೈನ್ ವಿದ್ಯುತ್ ತಂತಿ ಸೋಮವಾರ ಮುಂಜಾನೆ ೪ರ ಸುಮಾರಿಗೆ ಕಡಿದು ಬಿದ್ದು ತೋಟದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಮನೆಯವರು ತಕ್ಷಣ ಪರಿಸರದ ಮಂದಿ ಹಾಗೂ ಮೆಸ್ಕಾಂ ಜೆಇಯವರಿಗೆ ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ ಕೂಡಲೇ ಕಕ್ಕಿಂಜೆ ಸಬ್ ಸ್ಟೇಷನ್ ನಿಂದ ವಿದ್ಯುತ್ ಲೈನ್ ಆಫ್ ಮಾಡಿದ ಕಾರಣ ಹಾಗೂ ಮಳೆ ಇದ್ದುದರಿಂದ ಬೆಂಕಿ ಹತೋಟಿಗೆ ಬಂತು. ತಂತಿ ತುಂಡಾಗಿ ಬಿದ್ದ ಕಾರಣ ಪರಿಸರದ ನೂರಾರು ಮನೆಗಳಿಗೆ ಮಧ್ಯಾಹ್ನದವರೆಗೂ ವಿದ್ಯುತ್ ವ್ಯತ್ಯಯ ಉಂಟಾಯಿತು.

Related posts

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: 24 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ

Suddi Udaya

ಓಡಿಲ್ನಾಳ ಸ.ಉ.ಪ್ರಾ‌. ಶಾಲಾ ವಾರ್ಷಿಕೋತ್ಸವ ‘ಸಾಂಸ್ಕ್ರತಿಕ ಸಿಂಚನ’

Suddi Udaya

ಕೊಕ್ಕಡ ಕೇಸರಿ ಟೈಗರ್ಸ್ ವತಿಯಿಂದ ಭಜನಾ ಮಂದಿರಕ್ಕೆ ಸಹಾಯಧನ

Suddi Udaya

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಧರ್ಮಸ್ಥಳ ಭೇಟಿ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಸಭೆ

Suddi Udaya
error: Content is protected !!