24.6 C
ಪುತ್ತೂರು, ಬೆಳ್ತಂಗಡಿ
May 18, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರೋಡಿತ್ತಾಯಕಟ್ಟೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ರಚನೆ

ತೆಂಕಕಾರಂದೂರು: ಸ.ಉ. ಹಿ.ಪ್ರಾಥಮಿಕ ಶಾಲೆ, ಪೆರೋಡಿತಾಯಕಟ್ಟೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಆ. 25 ರಂದು ಸ. ಉ. ಹಿ. ಪ್ರಾ. ಶಾಲೆ ಪೆರೋಡಿತ್ತಾಯಕಟ್ಟೆ ಶಾಲೆಯಲ್ಲಿ ಜರಗಿತು.

ವೇದಿಕೆಯಲ್ಲಿ ಅಧ್ಯಕ್ಷ ಸತೀಶ್ ಶೆಟ್ಟಿ ಅಲಿಮಾರ್, ವಾರ್ಷಿಕೋತ್ಸವ ಸಮಿತಿ ಗೌರವ ಅಧ್ಯಕ್ಷ ಸಂತೋಷ್ ಹೆಗ್ಡೆ, ಕಾರ್ಯದರ್ಶಿ ಪ್ರಮೋಧರ ಗಿಂಡಾಡಿ, ಕೋಶಾಧಿಕಾರಿ ಶರೀಫ್ ಮಂಜೊಟ್ಟಿ, ಗೌರವ ಸಲಹೆಗಾರರಾದ ವಿಷ್ಣು ಸಂಪಿಗೆತ್ತಾಯ ಉಪಸ್ಥಿತರಿದ್ದರು.

ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ನೇಸರ, ಉಪಾಧ್ಯಕ್ಷರಾಗಿ ಸಂಶುದ್ದೀನ್ ಕಟ್ಟೆ, ಶರತ್ ಕಾಡಬಾಗಿಲು,
ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ ನೂಜಿ, ಜೊತೆ ಕಾರ್ಯದರ್ಶಿಗಳಾಗಿ ವಿಠಲ ಕಟ್ಟೆ, ಕೋಶಾಧಿಕಾರಿಯಾಗಿ ಶರೀಫ್ ಮಂಜೊಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಶೇಷಾಚಲ ಭಟ್ , ಗೌತಮ್ ಗಿಂಡಾಡಿ, ಸುಲೇಮಾನ್ ಗಿಂಡಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಜಯಂತ ಓಡದಕರಿಯ, ಜಯಪ್ರಕಾಶ್, ಸುರೇಖ ಶೆಟ್ಟಿ, ಸಿರಾಜ್ ಮಂಜೊಟ್ಟಿ, ಪ್ರಮೋದ್ ಮಿಲ್ ಬಳಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರಮೋಧರ ಗಿಂಡಾಡಿ, ಸುಜಿತ್ ಕಾಡಬಾಗಿಲು, ಪ್ರಕಾಶ್ ಕುಕ್ಕೆಟ್ಟು , ಗೌರವ ಸಲಹೆಗಾರರಾಗಿ ಸಂತೋಷ್ ಹೆಗ್ಡೆ, ಸತೀಶ್ ಶೆಟ್ಟಿ ಅಳಿಮಾರ್, ಅಶ್ರಫ್ ಕಟ್ಟೆ, ನಿಜಾಮ್ ಗಿಂಡಾಡಿ , ಕೆ ವಿಷ್ಣು ಸಂಪಿಗೆತ್ತಾಯ, ರಮಾನಾಥ ರೈ ,ಸಾಂತಪ್ಪ ಮೂಲ್ಯ, ಹೇಮಂತ್ ಗುಂಡೇರಿ, ಶಾಲಾ ಮುಖ್ಯಾಪಾಧ್ಯಾಯರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯ ಯಿನಿ ಬೆನ್ನಿ ಪಾಯ್ಸ್, ಶಿಕ್ಷಕಿ ಜ್ಯೋತಿ, ಶಾಲಾ ಎಸ್. ಎಂ. ಡಿ. ಸಿ ಅಧ್ಯಕ್ಷ ಮುಸ್ತಫಾ ಮಂಜೊಟ್ಟಿ, ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಶಾಲಾ ಅಭಿಮಾನಿಗಳು ಉಪಸ್ಥಿತರಿದ್ದರು.

Related posts

ಹೊಸಂಗಡಿ ಶೌರ್ಯ ‌ವಿಪತ್ತು ನಿರ್ವಹಣಾ ಘಟಕದಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ

Suddi Udaya

ನಾಲ್ಕೂರು ಬೋವಾಡಿ ದೈವಸ್ಥಾನದಲ್ಲಿ ದೊಂಪದ ಬಲಿ ಉತ್ಸವ: ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ ಸಂಗೀತ ದಿನಾಚರಣೆ

Suddi Udaya

ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಇದರ ಚುನಾವಣೆ: ಅಧ್ಯಕ್ಷರಾಗಿ ತಾ‌.ಪಂ. ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ, ಉಪಾಧ್ಯಕ್ಷರಾಗಿ ಶೀನಪ್ಪ ಎಂ ಮಲೆಕ್ಕಿಲ ಆಯ್ಕೆ

Suddi Udaya

ಬಿಸಿಯೂಟ ಸಿಬ್ಬಂದಿಗಳ ಮುಷ್ಕರದ ಹಿನ್ನಲೆ: ವಿದ್ಯಾರ್ಥಿಗಳಿಗೆ ಮನೆಯಿಂದಲೇ ಊಟದ ವ್ಯವಸ್ಥೆ ಕಲ್ಪಿಸಿದ ಸಮಾಜಸೇವಕ ಸಂತೋಷ್ ನಿನ್ನಿಕಲ್ಲು

Suddi Udaya

ಉಜಿರೆ: ನಾಪತ್ತೆಯಾಗಿದ್ದ ಕ್ರೀಡಾ ವಸತಿ ನಿಲಯದ ಪಿಯುಸಿ ವಿದ್ಯಾರ್ಥಿನಿ ಹೈದರಾಬಾದ್ ನಲ್ಲಿ ಪತ್ತೆ

Suddi Udaya
error: Content is protected !!