31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕೊಯ್ಯೂರು ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ

ಕೊಯ್ಯೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ದೇವಸ್ಥಾನ ಇದರ ಹಳೆ ವಿದ್ಯಾರ್ಥಿ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆಯು ಆ. 26 ರಂದು ನಡೆಯಿತು.

ಗೌರವ ಸಲಹೆಗಾರರಾಗಿ ಅಶೋಕ್ ಭಟ್ ಅಗ್ರಸಾಲೆ, ಅನಂತಕೃಷ್ಣ ಭಟ್, ಡೀಕಯ್ಯ ಪೂಜಾರಿ, ಶ್ರೀಮತಿ ಶ್ಯಾಮಲಾ ಮುಖ್ಯೋಪಾಧ್ಯಾಯರು, ನವೀನ್ ಕುಮಾರ್ ವಾದ್ಯಕೋಡಿ, ಅಧ್ಯಕ್ಷರಾಗಿ ಚಂದ್ರಶೇಖರ ಮಾವಿನಕಟ್ಟೆ, ಉಪಾಧ್ಯಕ್ಷರಾಗಿ ನೋಣಯ್ಯ ಪೂಜಾರಿ, ಅದಿತಿ ಹೇಮಲ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ವಿನಾಯಕ ಬೆದ್ರಲ್ಕೆ, ಜೊತೆ ಕಾರ್ಯದರ್ಶಿಗಳಾಗಿ ದೀಕ್ಷಿತ್ ಆರಂತೊಟ್ಟು,
ರವಿಚಂದ್ರ , ಕೋಶಾಧಿಕಾರಿಯಾಗಿ ಸದಾನಂದ ಗೌಡ ಅಡೆಂಕಿಲೊಟ್ಟು ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ವಿದ್ಯಾರ್ಥಿಗಳನ್ನು ಸಂಘದ ಸಕ್ರಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ ದೇವಾಡಿಗ ವಹಿಸಿದ್ದರು. ವೇದಿಕೆಯಲ್ಲಿ ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕುಮಾರ್ ವಾದ್ಯಕೋಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಂತಕೃಷ್ಣ ಭಟ್ಟ ಹಾಗೂ ಎಸ್.ಡಿ.,ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ಜಯಂತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿ ಕೇಶವ ಗೌಡ ,ಗ್ರಾ.ಪಂ.ಸದಸ್ಯೆ ಶ್ರೀಮತಿ ವಿಶಾಲಕ್ಷಿ ಉಪಸ್ಥಿತರಿದ್ದರು.

ಶಿಕ್ಷಕ ಸೀತಾರಾಮ ಸ್ವಾಗತಿಸಿದರು ಮತ್ತು ಶಿಕ್ಷಕಿ ಶ್ರೀಮತಿ ಚೆನ್ನಮ್ಮ ನಿರೂಪಿಸಿ ವಂದಿಸಿದರು.

Related posts

ತೆಂಕಾಕಾರಂದೂರು: ಹತ್ತೂರಿನ ಪ್ರೀತಿಗಿಂತ ವಾಸವಿರುವ ಊರಿನ ಪ್ರೀತಿಗೆ ಬೆಲೆ ಕಟ್ಟಲಾಗದು: ಪ.ರಾ.ಶಾಸ್ತ್ರಿ

Suddi Udaya

ಅದೂರುಪೇರಾಲ್ ಸ.ಹಿ.ಪ್ರಾ. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ವಿನಯ ಕೆ.

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುರಕ್ಷಾ ಚೆಕ್ ವಿತರಣೆ

Suddi Udaya

ಕಳೆoಜ ಗ್ರಾಮಸ್ಥರ ಮನವಿಗೆ ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ : ಕುದ್ರಾಯ ಕಕ್ಕಿಂಜೆ ಮುಖ್ಯ ರಸ್ತೆಯ ಮರಕ್ಕಡದಿಂದ ಮಿಯ್ಯಾರು ತನಕ ರಸ್ತೆ ಕಾಮಗಾರಿಗೆ ಚಾಲನೆ

Suddi Udaya

ಗೇರುಕಟ್ಟೆ: ಮಾನವೀಯತೆ ಮೆರೆದ ಕಳಿಯ ಗ್ರಾ.ಪಂ.ಕಾರ್ಯದರ್ಶಿ ಕುಂಞ ಕೆ., ಕಳಿಯ ಸಿ.ಎಚ್.ಓ. ಮತ್ತು ಸಿಬ್ಬಂದಿ

Suddi Udaya
error: Content is protected !!