April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ

ಮಚ್ಚಿನ: ನ್ಯೂ ಫ್ರೆಂಡ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ. 26 ರಂದು ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಶರರಾದ ಹರ್ಷ ಸಂಪಿಗೆತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರುಕ್ಮಿಣಿ, ಗೋಪಾಲ್ ಪೂಜಾರಿ ಕೊಲಾಜೆ , ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ನಾರಾಯಣ ಪೂಜಾರಿ ಅವರು ಸಭಾ ಅಧ್ಯಕ್ಷ ಸ್ಥಾನ ವಹಿಸಿದರು ಲ್ಯಾನ್ಸಿ ಪಾಯಸ್ ಸ್ವಾಗತಿಸಿ ಧನ್ಯವಾದ ನೀಡಿದರು.

ನಂತರ ವಿವಿಧ ಕ್ರೀಡಾಕೂಟ ನಡೆಯಿತು. ಸಂಜೆ ಬೈಕ್ ರೇಸ್ ಹಗ್ಗಜಗಾಟ ಗೋವಿಂದ ಸ್ಪರ್ಧೆ ಹಾಗೂ ವಿಶೇಷ ಆಕರ್ಷಣೆಯಾಗಿ ಬಳ್ಳಮಂಜ ಪೇಟೆಯಿಂದ ಹಟ್ಟಿ ಗೋವಿಂದ ಕೃಷ್ಣ ನೀಲೋತ್ಸವ ನೀರ ಓಕುಳಿ ಆಟದೊಂದಿಗೆ ಕ್ರೀಡಾಂಗಣಕ್ಕೆ ಭವ್ಯ ಮೆರವಣಿಗೆ ನಡೆಯಿತು. ಸಂಜೆ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪದ್ಮರಾಜ್ ಆರ್ ಪೂಜಾರಿ ಮಂಗಳೂರು. ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಟಿ ವಿ ಶ್ರೀಧರ್ ರಾವ್ ಪೇಜಾವರ ಪಾರೆಂಕಿ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ನಿತ್ಯಾನಂದ ಬಿ. ಹೆಜ್ಜಾರು ಚಲನಚಿತ್ರ ನಾಟಕ ಭಗವತ್ ಆಲ್ವಾ ದೀಪಕ್ ಕೋಟ್ಯಾನ್ ಸುಂಕದಕಟ್ಟೆ. ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷರಾದ ನಿತೀಶ್ ಹೆಚ್ ಕೋಟ್ಯಾನ್ ಜಿ ಆರ್ ಬಾರ್ ಮಾಲೀಕರಾದ ರಾಘವೇಂದ್ರ ಪ್ರಸಾದ್ . ಲಿಯೊ ರೋಡ್ರಿಗೆ ಉದ್ಯಮಿ ಆಕಾಶ್ ಎಚ್. ಪ್ರವೀಣ್. ಅಶೋಕ್ ನಾವುಡ ಸೀತಾರಾಮ್ ಬಂಗೇರ ಇವರು ಉಪಸ್ಥಿತರಿದ್ದರು.

ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ನಾರಾಯಣ ಪೂಜಾರಿ, ಕಾರ್ಯದರ್ಶಿ ನಿಶಾಂತ್, ಕೋಶಾಧಿಕಾರಿ ಶ್ರವಣ್, ಗೌರವ ಸಲಹೆಗಾರರಾದ ಪ್ರಮೋದ್ ಕುಮಾರ್ ಲ್ಯಾನ್ಸ್ ಪಾಯಸ್ , ಹರ್ಷ ಬಳ್ಳಮಂಜ, ಸದಾಶಿವ ಹೆಗ್ಡೆ, ಜಯರಾಮ್, ಸಂದೀಪ್ ಕುಂದರ್ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರೌಢಶಾಲೆಯಲ್ಲಿ ಕಲಿಕೆ ಹಾಗೂ ಕ್ರೀಡೆ ಕೋಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಘ ಪ್ರಾರಂಭದಿಂದ 30ನೇ ವರ್ಷದವರೆಗೂ ಅಧ್ಯಕ್ಷರಾಗಿದ್ದ ಅಧ್ಯಕ್ಷರುಗಳಿಗೆ ಗೌರವಿಸಲಾಯಿತು.

ಪ್ರಮೋದ್ ಕುಮಾರ್ ಸ್ವಾಗತಿಸಿ ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು ಹರ್ಷ ಬಳ್ಳಮಂಜ ಧನ್ಯವಾದ ಕೋರಿದರು

Related posts

ನಿಡಿಗಲ್-ಪಜಿರಡ್ಕ ಕಾಂಕ್ರೀಟ್ ರಸ್ತೆಯಲ್ಲಿ ಕುಸಿತ ಭೀತಿ

Suddi Udaya

ಅಡುಗೆ ಕೆಲಸಕ್ಕೆ ಹೋದ ಮುಂಡಾಜೆ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ ನಾಪತ್ತೆ: ಪತ್ನಿಯಿಂದ ಪೊಲೀಸರಿಗೆ ದೂರು

Suddi Udaya

ಮುಂಡಾಜೆ ಪ. ಪೂ. ಕಾಲೇಜು: ಜಾಗೃತ ಜಾಗೃತಿ ಸಪ್ತಾಹ

Suddi Udaya

ಕನ್ಯಾಡಿ-1 ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿ ಹೇಮಾವತಿ ವೀ. ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ನಾಳ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya
error: Content is protected !!