ಮಡಂತ್ಯಾರು: ಶ್ರೀಕೃಷ್ಣ ಜನ್ನಾಷ್ಟಮಿ ಸಮಿತಿಯಿಂದ 35 ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya

ಮಡಂತ್ಯಾರು: ಶ್ರೀಕೃಷ್ಣ ಜನ್ನಾಷ್ಟಮಿ ಸಮಿತಿಯಿಂದ 35 ನೇ ವರ್ಷದ ಮೊಸರು ಕುಡಿಕೆ ಉತ್ಸವ ಗಣಪತಿ ಮಂಟಪ ಮಡಂತ್ಯಾರುವಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಪಾರೆಂಕಿ ಮಾಜಿ ಆಡಳಿತ ಮೊಕ್ತೇಶರ ಎಂ.ವಿಠಲ ಶೆಟ್ಟಿ ನೇರವೇರಿಸಿ ಶುಭ ಕೋರಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಿದ್ದರು.ಕಾರ್ಯಕ್ರಮದಲ್ಲಿ ಯುವ ಗೌಡರ ಸಂಘದ ತಾಲೂಕು ಅಧ್ಯಕ್ಷ ಚಂದ್ರಕಾಂತ್ ಗೌಡ ನಿಡ್ಡಾಜೆ,ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ನಿತ್ಯಾನಂದ ಹೆಗ್ಡೆ,
ಉಪ್ಪಿನಂಗಡಿ‌ ಮೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್ ಕೋಟೆ,ಬಿಗ್ ಬ್ರದರ್ ಲ್ಯಾನ್ಸಿ ಪಿಂಟೋ,ಜೋಯೇಲ್ ಮೆಂಡೋನ್ಸ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಎಂ.ಸಂಜೀವ ಶೆಟ್ಟಿ ಮುಗೆರೋಡಿಯವರನ್ನು ಸನ್ಮಾನಿಸಲಾಯಿತು.ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾದ ಸಮಿತಿಯ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.

ಪ್ರಕಾಶ್ ಮಹಾದೇವನ್ ಮತ್ತು ತಂಡದವರಿಂದ ಆರ್ಕೆಸ್ಟ್ರಾ ನಡೆಯಿತು.ಪ್ರಸಿದ್ದ ಕುಣಿತಾ ಭಜನೆ ತಂಡದೊಂದಿಗೆ ಶ್ರೀಕೃಷ್ಣನ ಮೆರವಣಿಗೆ ನಡೆಯಿತು.ಮಕ್ಕಳಿಗೆ,ಪುರುಷರಿಗೆ,ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ದೆಗಳು ನಡೆದವು.ಶ್ರೀ ಕೃಷ್ಣ ವೆರಷ ಸ್ಪರ್ದೆ ಎಲ್ಲರ ಅಕರ್ಷಣೆಯಾಗಿತ್ತು.ಹಗ್ಗಜಗ್ಗಾಟ,ತ್ರೋಬಾಲ್,ಸ್ಲೋ ಸೈಕಲ್ ಬ್ಯಾಲೆನ್ಸ್,ಕ್ರಾಸ್ ಕಂಟ್ರಿ, ಗೋವಿಂದ ಸ್ಪರ್ದೆ,ಬೈಕ್ ರೇಸ್ ಎಲ್ಲರ ಗಮನ ಸೆಳೆಯಿತು

ಸಮಿತಿಯ ಸ್ಥಾಪಕ ಅಧ್ಯಕ್ಷ ಕೆ.ಪ್ರಭಾಕರ ಶೆಟ್ಟಿ, ಗೌರವಾಧ್ಯಕ್ಷ ಬಿ‌.ಪದ್ಮನಾಭ ಸುವರ್ಣ,ಅಧ್ಯಕ್ಷ ಪ್ರಶಾಂತ್ ಎಂ ಪಾರೆಂಕಿ,ಪದಾಧಿಕಾರಿಗಳಾದ ಸಚಿನ್ ಸುವರ್ಣ ಕೊಡ್ಲಕ್ಕೆ, ನಾರಾಯಣ ಪೂಜಾರಿ,ಶಂಕರ್ ಶೆಟ್ಟಿ ಸೋಣಂದೂರು,ಸುಕೇಶ್ ಕುಮಾರ್ ಸಾಲುಮರ,ಸಚಿನ್ ಆಲ್ಮುಡ ಹಾಗೂ ಸಮಿತಿ ಸದಸ್ಯರು ಸಹಕರಿಸಿದರು.

Leave a Comment

error: Content is protected !!