23.5 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕರಾಗಿ ವೃತ್ತಿ ಪದೋನ್ನತಿ ಹೊಂದಿದ್ದ ಡಾ. ಶ್ರೀಧರ ಭಟ್ ರವರಿಗೆ ಅಭಿನಂದನೆ ಸಲ್ಲಿಸಿದ ಶ್ರೀ ಕ್ಷೇತ್ರ ಸೌತಡ್ಕದ ಮಾಜಿ ವ್ಯವಸ್ಥಾಪನ ಸಮಿತಿ

ಹಿಂದೆ ಸೌತಡ್ಕ ಕ್ಷೇತ್ರದ ಇತಿಹಾಸ ಕಿರು ಪರಿಚಯ ಶ್ರೀ ಕ್ಷೇತ್ರ ಸೌತಡ್ಕ ಕೃತಿ ಬಿಡುಗಡೆಗೊಳಿಸಿದ ಚಿತ್ರ

ಕೊಕ್ಕಡ: ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶ್ರೀಧರ ಭಟ್ ರವರು 2021-24 ನೇ ಸೌತಡ್ಕ ದೇವಳದ ವ್ಯವಸ್ಥಾಪನಾ ಸಮಿತಿಯ ಅವಧಿಯಲ್ಲಿ ಹೊರ ತಂದಿರುವ ಶ್ರೀ ಕ್ಷೇತ್ರ ಸೌತಡ್ಕ. ನೆಲೆ -ಹಿನ್ನೆಲೆ ಮತ್ತು ಭಕ್ತಿ ಸ್ತೋತ್ರಗಳು. ಎನ್ನುವ ಕೃತಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಒಂದು ದಶಕದ ಹಿಂದೆ ಬೆಳ್ತಂಗಡಿ ತಾಲೂಕಿನ ದೇವಾಲಯಗಳ ಕಿರು ಅಧ್ಯಯನವನ್ನು ಸೌತಡ್ಕ ಗಣಪತಿ ದೇವರಿಗೆ ಪೂಜೆಯೊಂದಿಗೆ ಪ್ರಾರಂಭಿಸಿದರು. ಅಂದು ಪೂಜೆ ಮಾಡುತ್ತಿದ್ದ ಶ್ರೀ ಸತ್ಯ ಪ್ರಿಯ ಕಲ್ಲೂರಾಯರು ಎಲ್ಲರೂ ತಮ್ಮ ಕೆಲಸ ಪ್ರಾರಂಭಿಸುವಾಗ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಆದರೆ ನೀವು ದೇವರದ್ದೇ ಕೆಲಸವನ್ನು ಮಾಡುತ್ತಿದ್ದೀರಿ, ನಿಮಗೆ ದೇವರ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸಿ ಆಶೀರ್ವಾದ ಮಾಡಿದ್ದರು. ಅಂತೆಯೇ ಇವರು ಹಿಂದೆ ಸೌತಡ್ಕ ಕ್ಷೇತ್ರದ ಇತಿಹಾಸ ಕಿರು ಪರಿಚಯ ಕೃತಿಯನ್ನು ಬರೆದು ಬಿಡುಗಡೆ ಗೊಳಿಸಿದ್ದು, ಇವರು ಅಂದು ಮಾಡಿದ ಸೇವೆಗೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಪ್ರೊಫೆಸರ್ ಆಗಿ ಪದೋನ್ನತಿ ಹೊಂದಿದ್ದು ಇವರಿಗೆ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ನಿಕಟ ಪೂರ್ವ ವ್ಯವಸ್ಥಾಪನ ಸಮಿತಿಯವರು ಅಭಿನಂದನೆ ಸಲ್ಲಿಸಿರುತ್ತಾರೆ.


Related posts

ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ‌ ಮತ್ತು ಜೆಡಿಎಸ್ ಜಂಟಿ ಅಭ್ಯರ್ಥಿಗಳ ಜಯ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಿಶೋರ್ ಕುಮಾರ್ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ.) , ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರಥಮ ತಾಲೂಕು ಅಧಿವೇಶನ

Suddi Udaya

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ನಿಡ್ಲೆ: ಪಿಲಿಕಜೆ ನಿವಾಸಿ ಸುಗುಣ ನಿಧನ

Suddi Udaya

ನಾವೂರು ಗ್ರಾ.ಪಂ. ಕಾಯಿದೆ ಮತ್ತು ಮಕ್ಕಳ ಹಕ್ಕುಗಳ ಭಿತ್ತಿಪತ್ರ ಬಿಡುಗಡೆ

Suddi Udaya
error: Content is protected !!