April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಉಚಿತ ಯೋಗ ಶಿಕ್ಷಣ ತರಗತಿ ಉದ್ಘಾಟನೆ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ, ದ.ಕ ಜಿಲ್ಲೆ ಇದರ ವತಿಯಿಂದ ನಮ್ಮ ಮನೆ ಹವ್ಯಕ ಭವನ ಗುರುವಾಯನಕೆರೆಯಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನಾ ಕಾರ್ಯಕ್ರಮ ಆ.25ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಶಾಖೆಯ ಮುಖ್ಯ ಶಿಕ್ಷಕ ಡಾ.ಗೋವಿಂದ ಪ್ರಸಾದ್ ಕಜೆ ರವರು ವಹಿಸಿ, ಜೀವನದಲ್ಲಿ ಯೋಗದ ಅವಶ್ಯಕತೆ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕಿನ ಶಾಖೆಯ ಮುಖ್ಯ ಶಿಕ್ಷಕ ಕೃಷ್ಣಾನಂದ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್.ಪಿ.ವೈ.ಎಸ್.ಎಸ್ ಸಮಿತಿಯ ಪರಿಚಯವನ್ನು ಮಾಡಿದರು. ನಮ್ಮ ಮನೆ ಹವ್ಯಕ ಭವನದ ಅಧ್ಯಕ್ಷ ಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಸುಮಾರು 100ಕ್ಕೂ ಮಿಕ್ಕಿ ಯೋಗಾಸಕ್ತ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಶ್ವಿನಿ ಪ್ರಾರ್ಥಿಸಿ, ಪ್ರೇಮಲತಾ ಗಣೇಶ್ ನಿರೂಪಿಸಿ, ಆಶಾ ಸ್ವಾಗತಿಸಿ, ಪ್ರಜ್ಞಾ ವಂದಿಸಿದರು.

Related posts

ಕೊಕ್ಕಡ ಸರಕಾರಿ ಪ್ರೌಢಶಾಲೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘ ರಚನೆ

Suddi Udaya

ಬೆಳಾಲು ಕೀನ್ಯಾಜೆ ನದಿಯಿಂದ ಅಕ್ರಮ ಮರಳು ಸಾಗಾಟ ಪತ್ತೆ

Suddi Udaya

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಿಂದ 274 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Suddi Udaya

ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ “ಮಹಾಪರ್ವ” ರಿಯಾಯಿತಿ ಮೇಳ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ನೀರು ನೈರ್ಮಲ್ಯ ಸ್ವಚ್ಛ ಗ್ರಾಮ ಚಿತ್ರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ “ನವನಕ್ಷತ್ರ ಸನ್ಮಾನ” ಪ್ರಶಸ್ತಿ

Suddi Udaya
error: Content is protected !!