ಗುರುವಾಯನಕೆರೆ: ಕುವೆಟ್ಟು ಗ್ರಾಮ ಪಂಚಾಯತ್ ನ 2024-25 ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಉನ್ನತ ಮಟ್ಟದ ಇಲಾಖಾಧಿಕಾಧಿಕಾರಿಗಳ ಗೈರಿನಿಂದಾಗಿ ರದ್ದುಗೊಂಡಿತು.
ಗ್ರಾಮಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಗೈರಾಗಿದ್ದಾರೆ. ಕೆಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಆದರೆ ಅಧಿಕಾರಿಗಳು ಭಾರದೆ ನಮ್ಮ ಸಮಸ್ಯೆ ಯಾರಲ್ಲಿ ಹೇಳವುದು. ಕಾಟಾಚಾರಕ್ಕೆ ಗ್ರಾಮಸಭೆ ಮಾಡುವುದು ಬೇಡಾ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಮೇಲಾಧಿಕಾರಿಗಳಿಗೆ ಪತ್ರ ಮೂಲಕ ತಿಳಿಸಿದರೂ ಅವರು ಬರುವುದಿಲ್ಲ ಎಂದರೆ ನಾವು ಗ್ರಾಮ ಸಭೆಯನ್ನು ಬಹಿಷ್ಕಾರ ಮಾಡುತ್ತೇವೆ. ಏಳೆಂಟು ತಿಂಗಳು ಕಳೆದ ನಂತರ ಗ್ರಾಮಸಭೆ ಆದರೂ ಅಧಿಕಾರಿಗಳು ಯಾಕೆ ಬರುವುದಿಲ್ಲ. ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಬರಲಿ. ಬೆಳೆಯುತ್ತಿರುವ ಗುರುವಾಯನಕೆರೆಗೆ ಪ್ರದೇಶದ ಕುವೆಟ್ಟು ಪಂಚಾಯತ್ ಗೆ ಯಾಕೆ ಅಧಿಕಾರಿಗಳು ಬರುವುದಿಲ್ಲ.ಇತ್ತಿಚೆಗೆ ಸುರಿದ ಭಾರಿ ಮಳೆಯಿಂದ ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟಿದೆ. ಪಿಡ್ಲ್ಯೂಡಿ ಇಲಾಖೆಯವರು ಯಾರು ಬರಲಿಲ್ಲ. ಶಿಕ್ಷಣ ಇಲಾಖೆಯ ಡಿಡಿಪಿಐ ಯಲ್ಲಿ ಹಲವು ಸಮಸ್ಯೆಯ ಬಗ್ಗೆ ವಿಚಾರವನ್ನು ಮಾತಾಡೋಕೆ ಇದೆ. ಹೈವೆ ಅಧಿಕಾರಿಗಳು ಎಲ್ಲಿ. ಅವರಿಂದ ಸಮಸ್ಯೆಗಳಾಗಿದೆ, ನಾವು ಯಾರಲ್ಲಿ ಮಾತಾಡಬೇಕು, ಅವರು ಬರಬೇಕು ಎಂದು ಗ್ರಾಮಸ್ಥರು ಪಂಚಾಯತ ನ್ನು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು,ಮೆಸ್ಕಾಂ, ಕಂದಾಯ,ಪಿಡ್ಲೂಡಿ,ಪೋಲೀಸ್,ಶಿಕ್ಷಣ ಇಲಾಖೆ ಅಧಿಕಾರಿಗಳು ಬರಬೇಕು.ಇಲ್ಲದಿದ್ದರೆ ಗ್ರಾಮಸಭೆ ಬೇಡವೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಗ್ರಾಮಸಭೆಯನ್ನು ರದ್ದುಗೊಳಿಸಿ, ಸೆಪ್ಟೆಂಬರ್ 18 ಕ್ಕೆ ಗ್ರಾಮಸಭೆಗೆ ಮಾಡುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಿ ಅಧಿಕಾರಿಯಾಗಿ ಸಾಮಾಜಿಕ ವಲಯ ಅರಣ್ಯಧಿಕಾರಿ ಅಶೋಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್, ಉಪಾಧ್ಯಕ್ಷ ಗಣೇಶ್ ಕೆ, ಸದಸ್ಯರಾದ ಆನಂದಿ,ವೇದಾವತಿ,ಲಕ್ಷ್ಮೀಶ,ವನಿತಾ ಜಿ,ವಿಜಯಲಕ್ಷ್ಮಿ, ಸದಾನಂದ ಮೂಲ್ಯ, ನಿತೇಶ್, ಮಹಮ್ಮದ್ ಮುಸ್ತಾಫ, ಶಮೀಮುಲ್ಲಾ ಕೆ, ಮೈಮುನ್ನಿಸಾ, ನಿತಿನ್ ಕುಮಾರ್, ಪ್ರದೀಪ್ ಶೆಟ್ಟಿ, ಆಶಾಲತಾ, ಕೆ.ಮಂಜುನಾಥ, ರಚನಾ, ಹೇಮಂತ, ಉಷಾ, ಶಾಲಿನಿ, ಸುಮಂಗಲಾ, ಸಿಲ್ವೆಸ್ಟಾರ್ ಫೆಲಿಕ್ಸ್ ಮೋನಿಸ್, ಎಮ್ ರಿಯಾಜ್, ಅಮೀನಾ ಹಾಗೂ ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ,ಆಶಾ ಕಾರ್ಯಕರ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು.