22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಾಲ್ಕೂರು: ಯುವಶಕ್ತಿ ಫ್ರೆಂಡ್ ವತಿಯಿಂದ ಮೊಸರು ಕುಡಿಕೆ ಉತ್ಸವ, ಗಮನ ಸೆಳೆದ ರಂಗಿನ ಹೋಳಿ, ಬಣ್ಣದ ಓಕುಳಿ

ಬಳಂಜ: ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ನಿಟ್ಟಡ್ಕದಲ್ಲಿ ವಿಜೃಂಭಣೆಯ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ,ಹಿರಿಯರಾದ ನೋಣಯ್ಯ ಶೆಟ್ಟಿ ಕುರೆಲ್ಯಗುತ್ತು ನೇರವೇರಿಸಿ ಶುಭ ಕೋರಿದರು.

ಅಧ್ಯಕ್ಷತೆಯನ್ನು ಮಂಗಳೂರು ಸೋಮೇಶ್ವರ ಪುರಸಭೆ ಸದಸ್ಯ ಜಯ ಪೂಜಾರಿ ನಿಟ್ಟಡ್ಕ ವಹಿಸಿದ್ದರು.

ವೇದಿಕೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ,ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ದಿನೇಶ್ ಪಿ‌ಕೆ,ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ,ಸೂಳಬೆಟ್ಟು ಹಾ.ಉ.ಸ.ಸಂಘದ ಅಧ್ಯಕ್ಷ ನಿರಂಜನ್ ಜೋಶಿ,ಬಳಂಜ ಗ್ರಾ‌ಪಂ ಅಧ್ಯಕ್ಷೆ ಶೋಭಾ ಕುಲಾಲ್, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕರಾದ ಹೆಚ್.ದೇಜಪ್ಪ ಪೂಜಾರಿ,ವಿಶ್ವನಾಥ ಹೊಳ್ಳ,ದೇವಿಪ್ರಸಾದ್ ಶೆಟ್ಟಿ,ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಹೆಗ್ಡೆ, ಪ್ರಗತಿಪರ ಕೃಷಿಕ ದಿನೇಶ್ ಕೋಟ್ಯಾನ್ ಕುದ್ರೋಟ್ಟು,ನಾಲ್ಕೂರು ರಾಮನಗರ ಹಾ.ಉ.ಸ.ಸಂಘದ ಅಧ್ಯಕ್ಷ ವಸಂತ ಶೆಟ್ಟಿ,ಬಳಂಜ ಹಾ.ಉ.ಮ.ಸ.ಸಂಘದ ಅಧ್ಯಕ್ಷೆ ಪುಷ್ಪಾವತಿ,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಯ ನಿಕಟಪೂರ್ವಾದ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ಉಪಸ್ಥಿತರಿದ್ದರು.

ಯುವಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರಮುಖರಾದ ಸಂತೋಷ್ ಪಿ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಚಂದ್ರಹಾಸ್ ಬಳಂಜ ಕಾರ್ಯಕ್ರಮ‌ ನಿರೂಪಿಸಿದರು.ಕರುಣಾಕರ ಹೆಗ್ಡೆ ಮತ್ತು ಯತೀಶ್ ವೈ.ಎಲ್ ವಂದಿಸಿದರು. ಹರೀಶ್ ವೈ ಚಂದ್ರಮ ಕ್ರೀಡಾ ವಿಕ್ಷಣಾ ವಿವರಣೆ ಮಾಡಿದರು.

ನಂದ ಗೋಕುಲವಾದ ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ವೇದಿಕೆ: ಡೀಡಿ ಆಡ್ಯಾನೆ ರಂಗ..,ಬಾರೋ ಕೃಷ್ಣಯ್ಯಾ,ಪಿಳ್ಳಂಗೋವಿಯ ಚೆಲ್ವ ಕ್ರಷ್ಣನಾ ಹೀಗೆ ಒಂದರ ಹಿಂದೊಂದರಂತೆ ಕೃಷ್ಣನ ಲೀಲೆಗಳ ಗೀತೆಗಳು ಕೇಳಿ ಬರುತ್ತಿದ್ದಂತೆ ಒಬ್ಬೊರಂತೆ ಮುದ್ದು ಕೃಷ್ಣ, ಬಾಲಕೃಷ್ಣರು ವೇದಿಕೆಗೆ ಬಂದು ಲೀಲೆಗಳನ್ನು ತೋರಿದರು.ತಾಲೂಕು ಮಟ್ಟದ ಕೃಷ್ಣವೇಷ ಸ್ಪರ್ದೆಯಲ್ಲಿ ಸುಮಾರು 68 ಪುಟಾಣಿಗಳು ಕೃಷ್ಣನ ವೇಷಧಾರಿಗಳಾಗಿ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡರು.ಕೆಲವು ಪುಟಾಣಿಗಳು ನಾಚಿ ನೀರಾದರು.ಆಯೋಜಿಸಿದ ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವೇದಿಕೆ ನಂದ ಗೋಕುಲವಾಯಿತು.

ಸಾಧಕರಿಗೆ ಸನ್ಮಾನ,ಸಾಂತ್ವನ ನಿಧಿ ಹಸ್ತಾಂತರ: ವಿವಿಧ ಕ್ಷೇತ್ರದ ಸಾಧಕರನ್ನು ಯುವಶಕ್ತಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ರವೀಂದ್ರ ಶೆಟ್ಟಿ ಬಳಂಜ- ಸಾಮಾಜಿಕ ಕ್ಷೇತ್ರ,ಲಲಿತಾ ಟೀಚರ್- ಶೈಕ್ಷಣಿಕ ಕ್ಷೇತ್ರ,ಚೆನಮು ಪೂಜಾರಿ ಸಾಂತ್ಯಾಲು- ಜಾನಪದ ಕ್ಷೇತ್ರ,ಕೊರಪೋಲು ಯೈಕುರಿ- ಪ್ರಸೂತಿ ತಜ್ಞೆ ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕರಾದ ಪಿಯುಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಅನುಪ್ರಿಯಾ ಬಳಂಜ,ಪಿಯುಸಿ ಸಾಧಕರಾದ ಕೃತಿಕಾ ಜೈನ್ ಡೇವುಣಿ,ಪ್ರಾಣೇಶ್ ಶೆಟ್ಟಿ ಕುರೆಲ್ಯ,ಎಸ್.ಎಸ್.ಎಲ್.ಸಿ ಸಾಧಕರಾದ ಶರಣ್ಯ ಬರಮೇಲು,ಮನ್ವಿತಾ ಪೂಜಾರಿ ಇವರನ್ನು ಗೌರವಿಸಲಾಯಿತು.ಉತ್ತಮ ಕೆಲಸ ನಿರ್ವಹಿಸುತ್ತಿರುವ ಅಳದಂಗಡಿ ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಜಟ್ಟಿಂಗರಾಯ ಇವರನ್ನು ಗುರುತಿಸಲಾಯಿತು. ಎರಡು ಕಣ್ಣು ಕಳೆದುಕೊಂಡಿರುವ ಯುವಕ ಪೂರ್ಣೇಶ್ ಇವರಿಗೆ ಸಾಂತ್ವನ ನಿಧಿ ಹಸ್ತಾಂತರ ಮಾಡಲಾಯಿತು

ಗಮನ ಸೆಳೆದ ರಂಗಿನ ಹೋಳಿ,ಬಣ್ಣದ ಓಕುಳಿ: ವಿಶೇಷ ಆಕರ್ಷಣೆಯಾಗಿ ತನು ಕುಣಿದು,ಮನ ಬೆರೆತು ಜೊತೆಯಾಗಿ ಹೆಜ್ಜೆ ಹಾಕೋ ಆಟ ಕೃಷ್ಣ ರಂಗಿನಾಟ, ರಂಗಿನ ಹೋಳಿ ಬಣ್ಣದ ಓಕುಳಿ ಎಲ್ಲರ ಗಮನ ಸೆಳೆಯಿತು.ನೂರಾರು ಜನರು ಬಣ್ಣ ಹಂಚುತಾ ಹೆಜ್ಹೆ ಹಾಕಿದರು. ಮಕ್ಕಳು,ಯುವತಿಯರು,ಯವಕರು ಕುಣಿತು ಕುಪ್ಪಳಿಸಿದರು.

Related posts

ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳಾಲು ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ನಾರಾವಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಔಷಧಿ ವನ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬೃಹತ್ ಘಂಟೆ ಉದ್ಘಾಟನೆ; ಶಿವನ ನಾಮಸ್ಮರಣೆಯಿಂದ ಸಂಕಷ್ಟಗಳ ನಿವಾರಣೆ: ಡಾ.ಹೆಗ್ಗಡೆ

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ಪ್ರಾಕೃತಿಕ ವಿಕೋಪಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಸುರಕ್ಷತಾ ಜಾಗೃತಿ

Suddi Udaya

ರೇಂಜರ್ಸ್ ವಿಭಾಗದ ಜಾನಪದ ಗೀತ ಗಾಯನ ಸ್ಪರ್ಧೆ: ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಉಜಿರೆ ಮಾಚಾರು ಗುಂಡಿಕಂಡ ಮಣಿಕ್ಕೆ ಎಂಬಲ್ಲಿ ಬಾಬು ಎಂಬವರ ಮನೆಗೆ ಬಡಿದ ಸಿಡಿಲು: ಮನೆಯ ಮೀಟರ್ ಬೋರ್ಡ್, ಗೋಡೆ ಸಹಿತ, ಶೀಟ್ ಗೆ ಹಾನಿ

Suddi Udaya
error: Content is protected !!