April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದೇವರ ನಾಡು ಕೇರಳದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹರೀಶ್ ವೈ ಚಂದ್ರಮ ನೇತೃತ್ವದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು

ಬಳಂಜ :ಜಿಲ್ಲೆಯ ಹೆಸರಾಂತ ಕುಣಿತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಸದಸ್ಯರು ದೇವರ ನಾಡು ಕೇರಳದ ಕಾಸರಗೋಡು ಜಿಲ್ಲೆಯ ಬಂದಡ್ಕ ಶ್ರೀ ದುರ್ಗಾ ಬಾಲ ಗೋಕುಲ ಸ್ಥಾನಿಯ ಸಮಿತಿ ವತಿಯಿಂದ ನಡೆದ ಶ್ರೀ ಕೃಷ್ಣ ಜಯಂತಿ ಅಂಗವಾಗಿ ನಡೆದ ಕುಣಿತ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ನೀಡಿದರು.

ಸಮಾಜ ಸೇವಕರಾದ ಹರೀಶ್ ವೈ ಚಂದ್ರಮರವರ ಪ್ರಧಾನ ಸಂಚಾಲಕತ್ವದಲ್ಲಿ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಈಗಾಗಲೇ 236ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು 8 ಜಿಲ್ಲೆ ಹಾಗೂ ಎರಡು ಹೊರ ರಾಜ್ಯದಲ್ಲಿ ಕುಣಿತ ಭಜನೆಯಲ್ಲಿ ಭಾಗವಹಿಸಿ ಹೆಸರನ್ನು ಪಡೆದಿದೆ.

ಇದರ ಜೊತೆಗೆ ಹಲವು ಜನಪರ ಸೇವೆಯನ್ನು ಸಹ ಮಾಡುತ್ತಾ ಬರುತ್ತಿದ್ದಾರೆ. ಕೇರಳದಲ್ಲಿ ನಡೆದ ಕುಣಿತ ಭಜನಾ ಕಾರ್ಯಕ್ರಮವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಅಲ್ಲಿನ ಸಮಿತಿಯವರು ಮಂಡಳಿಯ ಸಂಚಾಲಕರಾದ ಹರೀಶ್ ವೈ.ಚಂದ್ರಮ,ಅಧ್ಯಕ್ಷರಾದ ಜ್ಯೋತಿ, ಹಾಗೂ ತರಬೇತುದಾರರಾದ ಕು.ಮಾನ್ಯ ರವರನ್ನು ಸನ್ಮಾನಿಸಿದರು.ಪೋಷಕರು ಮತ್ತು ಮಂಡಳಿಯ ಸದಸ್ಯರ ಪೂರ್ಣ ಸಹಕಾರದಿಂದ ಇಷ್ಟು ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಿದೆ ಎಂದು ಹರೀಶ್ ವೈ.ಚಂದ್ರಮ ಸಂತಸ ವ್ಯಕ್ತಪಡಿಸಿದ್ದಾರೆ.

ಮಂಡಳಿಯ ಮುಖ್ಯ ತರಬೇತುದಾರರಾಗಿ ಕು.ಮಾನ್ಯ ಹಾಗೂ ಅಧ್ಯಕ್ಷರಾಗಿ ಕು.ಜ್ಯೋತಿ, ಉಪ ಸಂಚಾಲಕರಾಗಿ ಪ್ರಣಾಮ್ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related posts

ಧರ್ಮಸ್ಥಳ ಶ್ರೀ ಮಂ. ಅ.ಪ್ರೌ. ಶಾಲೆಯಲ್ಲಿ ನಾಯಕತ್ವದ ಆಯ್ಕೆಗಾಗಿ ಚುನಾವಣೆ: ಶಾಲಾ ನಾಯಕನಾಗಿ ಜ್ಞಾನೇಶ್, ಉಪ ನಾಯಕನಾಗಿ ಪ್ರಜ್ವಲ್

Suddi Udaya

ಧರ್ಮಸ್ಥಳ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಬೆಳ್ತಂಗಡಿ ಕಾಂಗ್ರೇಸ್ ಮಹಿಳಾ ಘಟಕದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ “ಮನೆ ಮನೆಗೆ ಗಂಗಾಜಲ”

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಚ್ಛತಾ ಸಪ್ತಾಹ

Suddi Udaya

ಅರುವ ನಮ ಮಾತೆರ್ಲ ಒಂಜೇ ಕಲಾ ತಂಡದ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!