24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪದ್ಮುಂಜ: ವಾಹನ ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ : ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ವಾಹನ ತಡೆದು ಹಲ್ಲೆ ನಡೆಸಿ ಗಾಯಗೊಳಿಸಿರುವ ಕುರಿತು ಕಣಿಯೂರು ನಿವಾಸಿ ಸಿದ್ದಿಕ್(43ವ)ರವರು ನೀಡಿದ ದೂರಿನಂತೆ ಶರತ್ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆ.27ರಂದು ರಾತ್ರಿ ಸಿದ್ದೀಕ್ ಅವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿಗೆ ತಲುಪಿದಾಗ ಶರತ್ ಎಂಬಾತ ನಿಂತುಕೊಂಡು ಫೋನ್ ನಲ್ಲಿ ಮಾತನಾಡುತ್ತಿದ್ದ. ಆ ಸಮಯ ಎದುರಿನಿಂದ ಬೇರೆ ವಾಹನ ಬಂದುದರಿಂದ ಸಿದ್ದೀಕ್ ಅವರು ತಮ್ಮ ವಾಹನವನ್ನು ಆರೋಪಿಯ ಸಮೀಪದಿಂದ ಚಲಾಯಿಸಿದ್ದಾರೆ. ಈ ವೇಳೆ ಶರತ್ ಅವಾಚ್ಯವಾಗಿ ಬೈದಿದ್ದಾನೆ. ನಂತರ ಸಿದ್ದೀಕ್ ಅವರು ವಾಹನ ಚಲಾಯಿಸುತ್ತಾ ಮುಂದೆ ಹೋದಾಗ ಅವರ ಹಿಂದಿನಿಂದ ಶರತ್ ಮೋಟಾರು ಬೈಕಿನಲ್ಲಿ ಹಿಂಬಾಲಿಸಿ ಬಂದು ಸಿದ್ದೀಕ್ ಅವರನ್ನು ತಡೆದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾನೆ.

ಗಾಯಗೊಂಡ ಸಿದ್ದೀಕ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 100/2024003 0 126(2), 115(2), 352,351(2) BNS 2023 ರಡಿ ಪ್ರಕರಣ ದಾಖಲಾಗಿದೆ.

Related posts

ಪೆರಿಂಜೆ: ಕಾರು ಹಾಗೂ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ

Suddi Udaya

ವೇಣೂರಿನ ಕರಿಮಣೇಲು ಸನಿಹದ ಗಾಂಧಿನಗರದ‌ ಎರಡು ಮನೆಗಳಿಗೆ ಬುಧವಾರ ಸಂಜೆ ಸಿಡಿಲು ಬಡಿದು ಭಾರೀ ನಷ್ಟ

Suddi Udaya

ಮದ್ದಡ್ಕತಾಯಿ ಪಿಲಿ ಚಾಮುಂಡಿ ದೈವದ ವರ್ಷವಾದಿ ನೇವೋತ್ಸವ

Suddi Udaya

ಗುರಿಪಳ್ಳ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗಿಡನಾಟಿ, ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಬಳಂಜ ಗ್ರಾ.ಪಂ ಹಾಗೂ ಅರಣ್ಯ ಇಲಾಖೆಯಿಂದ ವನಮಹೋತ್ಸವ ಆಚರಣೆ

Suddi Udaya

ಅರಸಿನಮಕ್ಕಿ: ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ

Suddi Udaya
error: Content is protected !!