ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

Suddi Udaya

Updated on:

ಬೆಳ್ತಂಗಡಿ: ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2024-25ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ರಾಜ್ಯ ವಿದ್ಯಾರ್ಥಿ ವೇತನ(SSP) ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.

ಇಲಾಖಾ ವೆಬ್ ಸೈಟ್: www.sw.kar.nic.in/www.twd.karnataka.gov.in

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: ವಿದ್ಯಾರ್ಥಿ/ಪೋಷಕರ ಆಧಾರ್ ಸಂಖ್ಯೆ, ವಿದ್ಯಾರ್ಥಿಯ ಕಾಲೇಜು ಮತ್ತು ಕೋರ್ಸಿನ ವಿವರಗಳು/ನೋಂದಣಿ ಸಂಖ್ಯೆ ,ವಿದ್ಯಾರ್ಥಿ/ಪೋಷಕರ ಮೊಬೈಲ್ ಸಂಖ್ಯೆ , ಜಾತಿ/ಆದಾಯ ಪತ್ರದ ಆ‌ರ್.ಡಿ ಸಂಖ್ಯೆ ಪ್ರತಿ, ವಿದ್ಯಾರ್ಥಿಯ ಎಸ್.ಎಸ್.ಎಲ್.ಸಿ ನೋಂದಣಿ ಸಂಖ್ಯೆ, ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ ಗುರುತಿನ ಸಂಖ್ಯೆ/ ಕಾಲೇಜು ನೋಂದಣಿ ಸಂಖ್ಯೆ, ವಿದ್ಯಾರ್ಥಿಯ ಇ.ಮೇಲ್ ಐಡಿ, ವಿದ್ಯಾರ್ಥಿಯ ಮನೆಯ ವಿಳಾಸ , ಸಂಬಂಧಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ) ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ)

Leave a Comment

error: Content is protected !!