April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಶ್ರಾವಣ ತರಬೇತಿ ಸಪ್ತಾಹದ ಉದ್ಘಾಟನೆ

ಬೆಳ್ತಂಗಡಿ : ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ವತಿಯಿಂದ ಒಂದು ವಾರಗಳ ಕಾಲ ನಡೆಯುವ ತರಬೇತಿ ಸಪ್ತಾಹ ‘ಶ್ರಾವಣ ‘ ಇದರ ಉದ್ಘಾಟನಾ ಸಮಾರಂಭವನ್ನು ಆ. 25 ರಂದು ಬೆಳ್ತಂಗಡಿಯ ಬಿ ಸಿ ಎಂ ಹಾಸ್ಟೆಲ್‌ನಲ್ಲಿ ಆಯೋಜಿಸಲಾಯಿತು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ತರಬೇತಿ ಸಪ್ತಾಹವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಿರಂತರ ಕಲಿಕೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು. ಜೆಸಿಐ ಬೆಳ್ತಂಗಡಿಯು ವ್ಯಕ್ತಿತ್ವ ವಿಕಸನವನ್ನು ರೂಪಿಸುವ ತರಬೇತಿ ಕಾರ್ಯಕ್ರಮ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷರಾದ ರಂಜಿತ್ ಹೆಚ್ ಡಿ ವಹಿಸಿದ್ದರು . ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಲು ಮತ್ತು ತರಬೇತಿ ನೀಡಲು ವಿನ್ಯಾಸಗೊಳಿಸಲಾದ ಸರಣಿ ತರಬೇತಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ನಂತರ ವಲಯ ತರಬೇತುದಾರರಾದ ರಂಜಿತ್ ಎಚ್ ಡಿ ಬಳಂಜ ಇವರು ಎರಡು ತಾಸು ಸಭಾ ನಿರ್ವಹಣೆಯ ಬಗ್ಗೆ 50 ಮಂದಿ ಮಕ್ಕಳಿಗೆ ತರಬೇತಿಯನ್ನು ನೀಡಿದರು.

ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷರರಾದ ನಾರಾಯಣ ಶೆಟ್ಟಿ ಮಾಡಿದರು. ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷರಾದ ಸುಭಾಶ್ಚಂದ್ರ ಎಂ.ಪಿ., ಜೆಜೆಸಿ ಅಧ್ಯಕ್ಷ ಜೆಜೆಸಿ ಸಮನ್ವೀತ್ ಕುಮಾರ್, ಇದ್ದರು. ಕಾರ್ಯದರ್ಶಿ ಅನುದೀಪ್ ಜೈನ್ ಧನ್ಯವಾದ ಸಲ್ಲಿಸಿದರು.

Related posts

ಸಾಮಾಜಿಕ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಮಾಜಿ ಶಾಸಕರಾದ ಕೆ. ವಸಂತ ಬಂಗೇರ ನಿಧನಕ್ಕೆ ಎಸ್‌ಡಿಪಿಐ ಸಂತಾಪ

Suddi Udaya

ನದಿಗಳಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹ:ಮುಂಡಾಜೆಯ ದುಂಬೆಟ್ಟು ಬಳಿ ವಿದ್ಯುತ್ ಪರಿವರ್ತಕ ಧರಾಶಾಯಿ

Suddi Udaya

ಮಚ್ಚಿನ ಮೂಲ್ಯ ಯಾನೆ ಕುಂಬಾರರ ಸಂಘದ ಅಧ್ಯಕ್ಷರಾಗಿ ಮನೋಜ್ ಬಂಗಿದೊಟ್ಟು ಆಯ್ಕೆ

Suddi Udaya

ಕೊಕ್ಕಡ ಗ್ರಾ.ಪಂ. ನಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಉಪಾಧ್ಯಕ್ಷರಾಗಿ ಲೋಕೇಶ್ ಗೌಡ

Suddi Udaya
error: Content is protected !!