ಉರುವಾಲು : ನಮ್ಮ ಜೀವನದಲ್ಲಿ ನಾವು ಯಾವ ರೀತಿ ಬದುಕಬೇಕು ಎಂದು ಸ್ಪಷ್ಟ ದೂರ ದೃಷ್ಟಿಯನ್ನ ಇಟ್ಟುಕೊಂಡು ನಿರ್ದಿಷ್ಟ ಗುರಿ ಸಾಧನೆ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸಿದೆ. ಇವುಗಳ ನಿರ್ವಹಣೆಗೆ ಅಚ್ಚುಕಟ್ಟಾದ ಆಡಳಿತ ವ್ಯವಸ್ಥೆಯನ್ನು ಜಾರಿಗೆ ಮಾಡಿ ಅರ್ಹರಿಗೆ ಬೇಕಾದ ಸೌಲಭ್ಯಗಳನ್ನು ಯೋಜನೆಯು ಒದಗಿಸುತ್ತಿರುವುದು ಹೆಮ್ಮೆಯ ಸಂಗತಿ ಅರ್ಥಿಕ ಸಹಕಾರವನ್ನು ವಿನಿಯೋಗ ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರೈತ ಬಂದು ಆಹಾರೋದ್ಯಮ ಮಾಲಕರಾದ ಶಿವ ಶಂಕರ್ ನಾಯಕ್ ರವರು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಕಣಿಯೂರು ವಲಯದ ಉರುವಾಲು ಹಾಗು ಪದ್ಮುಂಜಾ ಒಕ್ಕೂಟಗಳ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯವಸ್ಥೆಯನ್ನು ಹಾಳುಗೆಡುವ ಮನೋಸ್ಥಿತಿ ಕೆಲವರಿಗೆ ಇದೆ ಇಂಥಹ ಚಟುವಟಿಕೆಗಳಿಗೆ ಆದ್ಯತೆ ನೀಡಬಾರದು ಕೆಳ ಮಟ್ಟದಲ್ಲಿ ಇದ್ದಾಗ ನಿಂದನೆ ಮಾಡಿದಾಗ ಕುಗ್ಗಬಾರದು ಯಶಸ್ವಿಯಾದಾಗ ಹೊಗಳಿಕೆಗೆ ಹಿಗ್ಗಬಾರದು ನಮ್ಮ ಕಷ್ಟಕ್ಕೆ ನೆರವಾಗಿರುವವರನ್ನ ನಾವು ಮರೆಯಬಾರದು ಜೀವನದಲ್ಲಿ ಯಾವುದೇ ಋಣ ಇಟ್ಟುಕೊಳ್ಳಬಾರದು ಕ್ಷೇತ್ರದ ಮೂಲಕ ಜಾರಿಗೊಳಿಸಿದ ಎಲ್ಲಾ ಕಾರ್ಯಕ್ರಮಗಳು ಸಮಾಜಮುಖಿಯಾಗಿದೆ ಎಂದು ಪ್ರಶಂಸಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧ ಗ್ರಾ ಯೋಜನೆಯ ದ. ಕ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಮಾತನಾಡುತ್ತ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಚಾರಿಟೇಬಲ್ ಟ್ರಸ್ಟ್ ಮೂಲಕ ಜನರ ಸೇವೆ ಮಾಡುತ್ತಿದೆ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲುವಾಗಿ ಗುಂಪುಗಳನ್ನು ರಚನೆ ಮಾಡಿ ಅವುಗಳಿಗೆ ಸಹಕಾರ ನೀಡುತ್ತಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ದೇಣಿಗೆ, ಅನುದಾನ ಗಳನ್ನೂ ಒದಗಿಸುವ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ತನ್ನ ಕೊಡುಗೆಯನ್ನು ನೀಡುತ್ತಿದೆ ಎಂದರು ವೇದಿಕೆಯಲ್ಲಿ ಶ್ರೀ ಪಂಚ ಲಿಂಗೇಶ್ವರ ದೇವಸ್ಥಾನ ಕೊರಿಂಜ ಆಡಳಿತ ಮೊಕ್ತೇಸರ ರಾದ ಯೋಗೀಶ್ ಪೂಜಾರಿ ಕಡ್ತಿಲ, ಅಧ್ಯಕ್ಷರಾದ ದಾಸಪ್ಪ ಗೌಡ ಕೊಡ್ಯಡ್ಕ, ಕಾರ್ಯದ್ಯಕ್ಷರಾದ ಸುನಿಲ್ ಗೌಡ ಅಣವು ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ರಮಾನಂದ ಪೂಜಾರಿ, ನೂತನ ಒಕ್ಕೂಟದ ಅಧ್ಯಕ್ಷರಾದ ಗಿರಿಧರ ಗೌಡ, ಈಶ್ವರ ಗೌಡ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಊರುವಾಲು ಒಕ್ಕೂಟದ ಅಧ್ಯಕ್ಷರಾದ ಕೃಷ್ಣಪ್ಪ ಕೆ ವಹಿಸಿದ್ದರು ಶ್ರೀ ವರಾಮಹಾಲಕ್ಷ್ಮಿ ಪೂಜೆ ಸಮಿತಿಯ ಅಧ್ಯಕ್ಷೆ ಶ್ರೀಮತಿ ಲಲಿತಾ ಎಸ್ ಹಾಜರಿದ್ದರು.
ವಲಯ ಮೇಲ್ವಿಚಾರಕರಾದ ಶಿವಾನಂದ ಸ್ವಾಗತಿಸಿದರು, ಸೇವಾ ಪ್ರತಿನಿಧಿ ಸೀತಾರಾಮ ನಿರೂಪಿಸಿದರು ಪದ್ಮುಂಜ ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ತಾರಾ ವರದಿ ಮಂಡಿಸಿದರು.