ಧರ್ಮಸ್ಥಳ : ಭಾರತದ ಸ್ವಾತಂತ್ರ್ಯದ ನಂತರ ಜನಸಂಖ್ಯೆ ಹೆಚ್ಚಾಗುತ್ತಾ ಹೋದಾಗ ದೇಶ ಮತ್ತು ಆಡಳಿತ ನಡೆಸುವರಿಗೆ ನಿರುದ್ಯೋಗದ ಸಮಸ್ಯೆ ಕಾಡಿದಾಗ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಆರಂಭಿಸಿದ ರುಡ್ ಸೆಟ್ ಸಂಸ್ಥೆಯಲ್ಲಿ ಯುವಜನರಿಗೆ ಶಿಕ್ಷಣ, ಜ್ಞಾನ, ಕೌಶಲ್ಯ, ನಡತೆ, ಮೌಲ್ಯಗಳನ್ನು ಕಲಿಸುವುದರ ಮೂಲಕ ರಾಷ್ಟ ನಿರ್ಮಾಣದಲ್ಲಿ ಕಾರ್ಯದಲ್ಲಿ ಮಹತ್ವದ ಸೇವೆಯನ್ನು ನೀಡುತ್ತದೆ. ಬದುಕಿನಲ್ಲಿ ಹುಟ್ಟು ಮತ್ತು ಸಾವಿನ ಮಧ್ಯೆ ಇವರ ದೌರ್ಬಲ್ಯವನ್ನು ಸವಾಲಾಗಿಸಿಕೊಂಡು ಅವಕಾಶಗಳ ಆಯ್ಕೆ ಮಾಡಿಕೊಂಡು ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಕಲಿಸುತ್ತದೆ, ಈ ಮೂಲಕ ರಾಷ್ಟ ಕಟ್ಟುವ ಕೆಲಸ ನೀವೆಲ್ಲ ನಡೆಸುತ್ತಿದ್ದೀರಿ ಅಭಿನಂದನೆಗಳು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆಯನ್ನು ಬೇರೆ ಬೇರೆ ವಿಭಾಗದಲ್ಲಿ ನಡೆಸುವ ಸವಾಲ್ ಗಳು ನಮ್ಮ ಮುಂದೆ ಇವೆ ಅದರ ಕಡೇ ಸಹ ನಾವೇಲ್ಲ ಗಮನಿಸಬೇಕಾಗಿದೆ.. ನಾವೇಲ್ಲ ಮಾನವರು ಮಾನವೀಯತೆ ಇರುವ ಮಾನವರಾಗುವ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಎಸ್.ಸತೀಶ್ಚಂದ್ರ ಹೇಳಿದರು.
ಧರ್ಮಸ್ಥಳದ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಆ.22 ಮತ್ತು 23 ರಂದು ನಡೆದ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಸ್ಥೆಗಳ ಪ್ರಗತಿ/ ಯಶ್ವಸ್ಸಿಗೆ ಅನುಗುಣವಾಗಿ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿ ಮತ್ತು ಬಹುಮಾನವನ್ನು ವಿತ್ತರಿಸಿದರು.
ಸಮಾರಂಭದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಸಮ್ಮೇಳನದ ಹಿನ್ನೋಟ ನೀಡಿದರು. ಮೈಸೂರುನ ಶ್ರೀಮತಿ ಸರಿತಾ ಧನ್ಯವಾದ ಮಾಡಿದರು. ಉಪನ್ಯಾಸಕರಾದ ಲೋಹಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನದಲ್ಲಿ ಭಾರತಾದ್ಯಂತ ಇರುವ ಎಲ್ಲಾ ರುಡ್ ಸೆಟ್ ಸಂಸ್ಥೆಗಳ ನಿರ್ದೇಶಕರು ಮತ್ತು ಉಪನ್ಯಾಸಕರು ಭಾಗವಹಿಸಿದ್ಧರು. ಗುರಗಾಂವ್ ನ ನಿರ್ದೇಶಕರಾದ ನಿರ್ಮಲ ಯಾದವ್, ಬೇರಾಂಪುರದ ಹೀಮಾದ್ರಿ ಮಿತ್ರ, ಗಾಜಿಯಾಬಾದ್ ನ ಉಪನ್ಯಾಸಕರಾದ ವೀರೇಶ್ ಕುಮಾರ್ ಸಿಂಗ್ , ಬೆಂಗಳೂರುನ ವಿ. ರವೀಂದ್ರ ಅವರುಗಳು ತಮ್ಮ ಸಮ್ಮೇಳನದ ಅನುಭವ ಹಂಚಿಕೊಂಡರು