ಮಚ್ಚಿನ : ಸಂಸ್ಕಾರ ಸಹಕಾರ ಸಂಘಟನೆ ಸಮೃದ್ಧಿಯ ಧ್ಯೇಯದೊಂದಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹುಟ್ಟು ಹಾಕಿದ ಸಂಸ್ಥೆ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಬಂಟ್ವಾಳ ತಾಲೂಕು ಇದರ ಬಂಟ್ವಾಳ ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿಯನ್ನು ಮಚ್ಚಿನ ಗ್ರಾಮದಲ್ಲಿ ಸುಂದರ ಪೂಜಾರಿ ಅವರ ಕಟ್ಟಡದಲ್ಲಿ ಆ.29ರಂದು ಉದ್ಘಾಟನೆಗೊಂಡಿತು.
ಪ್ರಗತಿಪರ ಕೃಷಿಕರಾದ ಕೃಷ್ಣ ಪ್ರಭು ಮುದಲಡ್ಕ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷರಾಗಿ ಮಚ್ಚಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಇರು ಮಾತನಾಡಿ ಒಂದೇ ಮನಸ್ಸಿನ ಸದಸ್ಯರು ಒಟ್ಟುಗೂಡಿ ಸಂಘವನ್ನು ರಚಿಸಿ ಉಳಿತಾಯ ಮಾಡಿ ಸಾಲವನ್ನು ಪಡೆದು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯರು ಪ್ರಮೋದ್ ಕುಮಾರ್, ಸದಸ್ಯರಾದ ಶುಭಕರ, ಡಾ. ಮಾಧವ ಕೆ ಶೆಟ್ಟಿ ಬಳ್ಳಮಂಜ, ವಲಯದ ಸೇವಾ ದೀಕ್ಷಿತೆಯರಾದ ಜಯಮಾಲಾ, ಪುಷ್ಪವತಿ, ಶಶಿಕಲಾ, ಸರೋಜಿನಿ, ವಲಯ ಮೇಲ್ವಿಚಾರಕಿ ಜಯಲಕ್ಷ್ಮಿ ಪ್ರಭು, ವಲಯ ಸಂಯೋಜಕಿ ಸುಮಿತ್ರ ಉಪಸ್ಥಿತರಿದ್ದರು.
ಹರೀಶ್ ಕುಮಾರ್ ಕಾರ್ಯಕಮ ನಿರೂಪಿಸಿ, ಪುರಂದರ ಸ್ವಾಗತಿಸಿದರು. ಮಚ್ಚಿನ ಗ್ರಾಮದ ಸೇವಾ ದೀಕ್ಷಿತೆ ಮಂಜುಳಾ ಶರ್ಮ ಧನ್ಯವಾದವಿತ್ತರು.