ವೇಣೂರು: ವೇಣೂರು ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಹೊಸ ಬಸ್ಸು ತಂಗುದಾನದ ಸಭಾಭವನದಲ್ಲಿ ನಡೆಯಿತು.
ಗ್ರಾಮಸಭೆಯ ಪ್ರಾರಂಭದಲ್ಲಿ ಅಗಲಿದ ಮಾಜಿ ಶಾಸಕ ಕೆ.ವಸಂತ ಬಂಗೇರರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು.
ಭಾರಿ ಮಳೆಗೆ ಸರಕಾರಿ ಪ್ರೌಢ ಶಾಲೆ ವೇಣೂರು ಕುಸಿಯುವ ಹಂತಕ್ಕೆ ತಲುಪಿದೆ. ಶಾಲೆಯ ಕಂಪೌಂಡ್, ಗೋಡೆ,ಮಾಡು ಬೀಳುವ ಹಂತದಲ್ಲಿದೆ. ಒಂದು ವೇಳೆ ಬರೆ ಬಿದ್ದು ಪ್ರೌಢ ಶಾಲೆ ನೆಲಸಮವಾದರೆ ವಿದ್ಯಾರ್ಥಿಗಳ ಗತಿಯೇನು. ಇಗಾಗಲೇ ರಾತ್ರಿ 1.30 ಗಂಟೆ ತನಕ ಮಕ್ಕಳ ಹೆತ್ತವರು, ಊರುವವರು ಶ್ರಮದಾನ ಮಾಡುತ್ತಿದ್ದರೆ. ಶಾಲೆಯ ಪ್ರೌಢ ಶಾಲೆ ದುರಸ್ಥಿಗೆ ಪಂಚಾಯತ್ ನಿಂದ ಕೂಡಲೇ 5 ಲಕ್ಷದ ಚೆಕ್ ನೀಡಬೇಕೆಂದು ಮಾಜಿ ಗ್ರಾ.ಪಂ ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ ಒತ್ತಾಯಿಸಿದರು.
ಮಂಗಗಳ ಹಾವಳಿಯಿಂದ ಬೆಳೆಗಳು ನಾಶವಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವೇಣೂರಿನಲ್ಲಿ ಮಂಕಿ ಪಾರ್ಕ್ ನಿರ್ಮಿಸಲು ಗ್ರಾಮಸ್ಥರು ಒತ್ತಾಯಿಸಿದರು.
ಮಲೆನಾಡು ಪ್ರದೇಶದಲಿ ಮಂಗಳ ಹಾವಳಿಯಿದೆ. ಇದರ ಬಗ್ಗೆ ವಿಧಾನಸಭೆಯಲ್ಲಿಯೂ ಚರ್ಚೆಗಳು ನಡೆದಿವೆ ಎಂದು ವಲಯ ಅರಣ್ಯ ಅಧಿಕಾರಿ ತಿಳಿಸಿದರು.
ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ ಮಾರ್ಗದರ್ಶಿ ಅಧಿಕಾರಿಯಾಗಿ ಗ್ರಾಮಸಭೆಯನ್ನು ಮುನ್ನಡೆಸಿದರು.
ಪಂಚಾಯತ್ ಉಪಾಧ್ಯಕ್ಷ ಉಮೇಶ್ ಎನ್, ಸದಸ್ಯರಾದ ಸುಮ,ಮಾಲತಿ,ಅರುಣ ಹೆಗ್ಡೆ,ಜಿನ್ನು,ಶೈಲಜಾ,ಸುಂದರ ಹೆಗ್ಡೆ,ಅನೂಪ್ ಜೆ ಪಾಯಸ್,ವೀಣಾ , ನೇಮಯ್ಯ, ಹರೀಶ್, ಶುಭ, ಸುಚಿತ್ರಾ, ಜಯಂತಿ, ದಿನೇಶ, ವಸಂತಿ, ಸಂಭಾಷಿಣಿ, ಅರುಣಾ ಕ್ರಾಸ್ತ,ಡಿ.ಪುಷ್ಪಾ,ಲೀಲಾವತಿ, ಸುಜಾತ, ಲೋಕಯ್ಯ ಪೂಜಾರಿ,ಸುನೀಲ್ ಕುಮಾರ್ ಪಿ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು,ಗ್ರಾಮಸ್ಥರು ಸಹಕರಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್ ಅನುಪಾಲನ ವರದಿ ಮಂಡಿಸಿದರು. ಪಂಚಾಯತ್ ಕಾರ್ಯದರ್ಶಿ ವನಜ ಸ್ವಾಗತಿಸಿದರು.ದ್ವೀತಿಯ ದರ್ಜೆ ಲೆಕ್ಕ ಸಹಾಯಕ ರಾಜು ಜಮಾಖರ್ಚಿನ ವಿವಿರ ನೀಡಿದರು.